ಕವಿತೆ: ಚಿಂತೆಯ ಬದುಕು

– .

ಬದುಕಿನ ಪಯಣದಲಿ
ಹಲವು ದಾರಿಗಳು
ಯಾವ ದಾರಿಯಲಿ ಸಾಗುವೆ ಮನವೆ
ನಿನ್ನೊಳಗೇ ಗೂಡುಕಟ್ಟಿತೇ ಚಿಂತೆ

ಎಲ್ಲಿ ಹೋದರೇನು
ಎಲ್ಲಿದ್ದರೇನು ಕಾಡುವುದ ಬಿಟ್ಟೀತೇ
ನಿನಗೆ ಚಿಂತೆ

ಎಳವೆಯಲಿ ಆಟಪಾಟ ಯಾರದೋ ಬಯದ ಚಿಂತೆ
ಹರಯದಲಿ ಪ್ರೀತಿ ಪ್ರೇಮದ ಚಿಂತೆ
ವಯಸ್ಕನಲಿ ದುಡಿಮೆ ಸಂಸಾರದ ಚಿಂತೆ
ವ್ರುದ್ಯಾಪ್ಯದಲಿ ಸಾವಿನ ಚಿಂತೆ

ಚಿಂತೆ ಬಿಡುವುದಿಲ್ಲವೋ
ಚಿತೆಯ ಏರುವ ತನಕ
ಲೋಕದ ಜನರ ಬಾಯಲಿ
ನಿನ್ನ ಚಿಂತೆ
ತಮಗಿಂತಲೂ ನಿನ್ನ ಚಿಂತೆ ಲೋಕದೊಳಗೆ

ಬದಲಾಗದ ಲೋಕದ ಜನರ ಚಿಂತೆ ಬಿಟ್ಟು
ಜಾಲಿಯ ಮರದಂತಾಗದೆ
ನೀನು ನೀನಾಗೆ ಬದುಕಿಬಿಡೋ
ಜೇನಿನಂತೆ ಆಕಳಿನಂತೆ

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: