ಟೊಮೆಟೊ ಕೂರ‍್ಮಾ

– ಸವಿತಾ.

ಬೇಕಾಗುವ ಸಾಮಾನುಗಳು

ಈರುಳ್ಳಿ – 2
ಟೊಮೆಟೊ – 4
ಹಸಿ ಕೊಬ್ಬರಿ ತುರಿ – 4 ಚಮಚ
ಗೋಡಂಬಿ – 6
ಹಸಿ ಮೆಣಸಿನಕಾಯಿ – 2
ಒಣ ಮೆಣಸಿನಕಾಯಿ – 1
ಒಣ ಕಾರದ ಪುಡಿ – 1 ಚಮಚ
ಸೋಂಪು ಕಾಳು – 1/2 ಚಮಚ
ಕೊತ್ತಂಬರಿ ಕಾಳು – 1/2 ಚಮಚ
ಸಾಂಬಾರ ಪುಡಿ – 1 ಚಮಚ
ಚಕ್ಕೆ – 1/2 ಇಂಚು
ಲವಂಗ – 2
ಏಲಕ್ಕಿ – 1
ಸಕ್ಕರೆ – 1/2 ಚಮಚ
ಎಣ್ಣೆ – 3 ಚಮಚ
ಸಾಸಿವೆ – 1/4 ಚಮಚ
ಜೀರಿಗೆ – 1/4 ಚಮಚ
ಕರಿಬೇವು – ಸ್ವಲ್ಪ
ಇಂಗು – ಸ್ವಲ್ಪ
ಹಸಿ ಶುಂಟಿ – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಅರಿಶಿಣ ಪುಡಿ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಹಸಿ ಕೊಬ್ಬರಿ ತುರಿ ಮತ್ತು ಹಸಿ ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಮತ್ತು ಗೋಡಂಬಿ ಸೇರಿಸಿ ನುಣ್ಣಗೆ ರುಬ್ಬಿ ಇಟ್ಟು ಕೊಳ್ಳಿ. ಈರುಳ್ಳಿ, ಟೊಮೆಟೊ, ಹಸಿ ಶುಂಟಿ ಸಣ್ಣ ಕತ್ತರಿಸಿ ಇಟ್ಟುಕೊಳ್ಳಿ.

ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಅದರಲ್ಲಿ ಸಾಸಿವೆ, ಜೀರಿಗೆ, ಕರಿಬೇವು, ಇಂಗು ಸೇರಿಸಿ ಚೆನ್ನಾಗಿ ಹುರಿಯಿರಿ. ಒಣ ಮೆಣಸಿನಕಾಯಿ ಮುರಿದು ಹಾಕಿ, ಏಲಕ್ಕಿ, ಲವಂಗ, ಚಕ್ಕೆ, ಕೊತ್ತಂಬರಿ ಕಾಳು ಕುಟ್ಟಿ ಪುಡಿ ಮಾಡಿ ಹಾಕಿ. ಸೋಂಪು ಕಾಳು ಹಾಕಿ. ಕತ್ತರಿಸಿದ ಹಸಿ ಶುಂಟಿ, ಈರುಳ್ಳಿ, ಟೊಮೆಟೊ ಹಾಕಿ ಹುರಿಯಿರಿ. ರುಬ್ಬಿದ ಹಸಿ ಕೊಬ್ಬರಿ ಮಿಶ್ರಣ ಹಾಕಿ ಚೆನ್ನಾಗಿ ಕಲಸಿ. ರುಚಿಗೆ ತಕ್ಕಶ್ಟು ಉಪ್ಪು ಮತ್ತು ಅರಿಶಿಣ ಪುಡಿ ಮತ್ತು ಒಣ ಕಾರದ ಪುಡಿ ಹಾಕಿ ಚೆನ್ನಾಗಿ ಹುರಿಯಿರಿ. ಸ್ವಲ್ಪ ನೀರು ಸೇರಿಸಿ ಒಂದು ಕುದಿ ಕುದಿಸಿ, ಸಾಂಬಾರ್ ಪುಡಿ, ಸಕ್ಕರೆ ಹಾಕಿ ಕುದಿಸಿ ಇಳಿಸಿ.

ಮೇಲೆ ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಉದುರಿಸಿ. ಈಗ ಟೊಮೆಟೊ ಕೂರ‍್ಮಾ ಸವಿಯಲು ಸಿದ್ದ. ಇಡ್ಲಿ, ದೋಸೆ, ಚಪಾತಿ ಅತವಾ ಪೂರಿ , ಅನ್ನ ದ ಜೊತೆ ಸೈಡ್ ಡಿಶ್ ಆಗಿ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: