ಕವಿತೆ: ಅವಳಲ್ಲವೇ

– .

ಹೆತ್ತವಳವಳಲ್ಲವೇ
ಹೊತ್ತವಳವಳಲ್ಲವೇ
ತುತ್ತಿಟ್ಟವಳವಳಲ್ಲವೇ
ಮುತ್ತಿಟ್ಟವಳವಳಲ್ಲವೇ

ಹಾಲುಣಿಸಿದವಳವಳಲ್ಲವೇ
ಲಾಲಿ ಹಾಡಿದವಳವಳಲ್ಲವೇ
ಜೋಲಿ ತೂಗಿದವಳವಳಲ್ಲವೇ
ಲಾಲಿಸಿ ಪಾಲಿಸಿದವಳವಳಲ್ಲವೇ

ಹಡೆದವಳವಳಲ್ಲವೇ
ಒಡಹುಟ್ಟಿದವಳವಳಲ್ಲವೇ
ಒಡನಾಡಿಯಾದವಳವಳಲ್ಲವೇ
ನಡೆನುಡಿ ಕಲಿಸಿದವಳವಳಲ್ಲವೇ

ಮನೆಯ ದೀಪವಳವಳಲ್ಲವೇ
ಮನೆಯ ಬೆಳಗುವಳವಳಲ್ಲವೇ
ಮನೆಗೆ ಮಹಾಲಕ್ಶ್ಮೀ ಅವಳಲ್ಲವೇ
ಮನೆತನ ವ್ರುಕ್ಶಕ್ಕೆ ಬೇರವಳಲ್ಲವೇ.

ಪ್ರಕ್ರುತಿಯ ಪ್ರತಿರೂಪ ಅವಳಲ್ಲವೇ
ಸಂಸ್ಕ್ರುತಿಯ ಜ್ಯೋತಿ ಅವಳಲ್ಲವೇ
ಅವಳಿಲ್ಲದೇ ನಾವ್ಯಾರಿಲ್ಲ ಅಲ್ಲವೇ
ಅವಳ ರಕ್ಶಣೆ ಹೊಣೆ ನಮ್ಮದಲ್ಲವೇ

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: