ಆಲೂ ಪಾಲಕ್ ಗಸಿ

ಕಲ್ಪನಾ ಹೆಗಡೆ.

ಬೇಕಾಗುವ ಸಾಮಾನುಗಳು

  • ಪಾಲಕ ಸೊಪ್ಪು –  1 ಕಟ್ಟು
  •  ಅಲೂಗಡ್ಡೆ – 4
  • ಹಸಿಮೆಣಸಿನಕಾಯಿ – 2 ಅತವಾ 4
  • ಶುಂಟಿ – ಸ್ವಲ್ಪ
  • ಈರುಳ್ಳಿ – 1
  • ಟೊಮೇಟೊ – 1
  • ಒಗ್ಗರಣೆಗೆ ಒಂದು ಚಮಚ ತುಪ್ಪ,ಸಾಸಿವೆ, ಜೀರಿಗೆ ಹಾಗೂ ಒಂದು ಒಣ ಮೆಣಸಿನಕಾಯಿ.
  • ಕಾಲು ಚಮಚ ಸಕ್ಕರೆ ಅತವಾ ಬೆಲ್ಲ
  • ರುಚಿಗೆ ತಕ್ಕಶ್ಟು ಉಪ್ಪು

ಮಾಡುವ ಬಗೆ

ಮೊದಲು ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಬೇಯಿಸಿಕೊಳ್ಳಬೇಕು. ಇದು ಚೆನ್ನಾಗಿ ಆರಿದ ನಂತರ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಮಿಕ್ಸಿಗೆ ಹಸಿಮೆಣಸಿನಕಾಯಿ, ಶುಂಟಿಯನ್ನು ಹಾಕಿ ರುಬ್ಬಿ ಪೇಸ್ಟ್ ಮಾಡಿಟ್ಟುಕೊಳ್ಳಿ. ಆನಂತರದಲ್ಲಿ ಅಲೂಗಡ್ಡೆಯನ್ನು ಸಿಪ್ಪೆ ತೆಗೆದು ಬೆಯಿಸಿಕೊಳ್ಳಿ. ನಂತರದಲ್ಲಿ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಕಾಲು ಚಮಚ ಸಾಸಿವೆ, ಕಾಲು ಚಮಚ ಅರಿಶಣ, ಅರ‍್ದ ಚಮಚ ಜೀರಿಗೆ ಹಾಕಿರಿ. ನಂತರ ಹೆಚ್ಚಿದ ಈರುಳ್ಳಿ, ಟೊಮೇಟೊ ಹಾಕಿ ಪ್ರೈ ಮಾಡಿದ ಮೇಲೆ ರುಬ್ಬಿದ ಪಾಲಕ್ ಸೊಪ್ಪಿನ ಕಲಕವನ್ನು ಹಾಗೂ ಹಸಿಮೆಣಸಿನಕಾಯಿ ಶುಂಟಿ ಪೇಸ್ಟನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಬಳಿಕ ಬೇಯಿಸಿಟ್ಟ ಆಲೂಗಡ್ಡೆಯನ್ನು ಹಿಚುಕಿ ಆತವಾ ಹೆಚ್ಚಿಕೊಂಡು ರುಚಿಗೆ ತಕ್ಕಸ್ಟು ಉಪ್ಪು ಹಾಗೂ ಕಾಲು ಚಮಚ ಸಕ್ಕರೆ ಅತವಾ ಬೆಲ್ಲ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಆನಂತರದಲ್ಲಿ ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ, ಚಿಟಿಕೆ ಸಾಸಿವೆ, ಜೀರಿಗೆ, ಒಂದು ಒಣ ಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ತಯಾರಿಸಿದ ಆಲೂ ಪಾಲಕ್ ಗಸಿಯನ್ನು ಚಪಾತಿಯೊಂದಿಗೆ, ಜೋಳದ ರೊಟ್ಟಿಯೊಂದಿಗೆ ಅತವಾ ಅನ್ನದೊಂದಿಗೆ ಸವಿಯಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: