ಹಾಗಲಕಾಯಿ ಗೊಜ್ಜು
– ಸವಿತಾ.
ಬೇಕಾಗುವ ಸಾಮಾನುಗಳು
- ಹಾಗಲ ಕಾಯಿ – 3
- ಹುಣಸೇ ಹಣ್ಣು – 1 ನಿಂಬೆ ಹಣ್ಣಿನ ಗಾತ್ರ
- ಬೆಲ್ಲ – 1/2 ನಿಂಬೆ ಹಣ್ಣಿನ ಅಳತೆ
- ಒಣ ಕಾರದ ಪುಡಿ – 2 – 3 ಚಮಚ
- ಸಾಂಬಾರ್ ಪುಡಿ – 1 ಚಮಚ
- ಎಣ್ಣೆ – 4 ಚಮಚ
- ಸಾಸಿವೆ – 1/2 ಚಮಚ
- ಜೀರಿಗೆ – 1/2 ಚಮಚ
- ಉದ್ದಿನ ಬೇಳೆ – 1 ಚಮಚ
- ಕರಿ ಬೇವು – 8-10 ಎಲೆ
- ಅರಿಶಿಣ ಪುಡಿ – ಸ್ವಲ್ಪ
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಉಪ್ಪು – ರುಚಿಗೆ ತಕ್ಕಶ್ಟು
ಮಾಡುವ ಬಗೆ
ಹುಣಸೇ ಹಣ್ಣಿಗೆ ನೀರು ಹಾಕಿ ನೆನೆಯಲು ಇಟ್ಟುಕೊಳ್ಳಿ. ಹಾಗಲ ಕಾಯಿ ತೊಳೆದು ಸಣ್ಣಗೆ ಕತ್ತರಿಸಿ, ಸ್ವಲ್ಪ ಉಪ್ಪು ಮತ್ತು ಅರಿಶಿಣ ಪುಡಿ ಹಾಕಿ ಹತ್ತು ನಿಮಿಶ ಇಡಿ. ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಹಾಗಲಕಾಯಿ ಹುರಿದು ತೆಗೆಯಿರಿ. ನಂತರ ಅದೇ ಬಾಣಲೆಗೆ ಇನ್ನೂ ಸ್ಪಲ್ಪ ಎಣ್ಣೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಸಾಸಿವೆ, ಜೀರಿಗೆ, ಕರಿಬೇವು ಉದ್ದಿನ ಬೇಳೆ ಹಾಕಿ ಹುರಿಯಿರಿ. ಈಗ ಹುರಿದ ಹಾಗಲಕಾಯಿ ಸೇರಿಸಿ ಚೆನ್ನಾಗಿ ಹುರಿಯಿರಿ. ಹುಣಸೇ ರಸ ಸೇರಿಸಿ ಬೆಲ್ಲ ಹಾಕಿ, ರುಚಿನೋಡಿ ಬೇಕೆನಿಸುವಶ್ಟು ಉಪ್ಪು ಹಾಕಿಕೊಳ್ಳಿ, ಒಣ ಕಾರದ ಪುಡಿ ಮತ್ತು ಸಾಂಬಾರ್ ಪುಡಿ ಸೇರಿಸಿ ಒಂದು ಕುದಿ ಕುದಿಸಿ ಇಳಿಸಿ. ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ತಿರುಗಿಸಿ. ಈಗ ಹಾಗಲಕಾಯಿ ಗೊಜ್ಜು ಸವಿಯಲು ಸಿದ್ದ, ಅನ್ನದ ಜೊತೆ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು