ಬೇಳೆ ಪೊಂಗಲ್

– ಕಿಶೋರ್ ಕುಮಾರ್

ಬೇಕಾಗುವ ಸಾಮಾನುಗಳು

  • ಹೆಸರುಬೇಳೆ – 1 ಲೋಟ
  • ಅಕ್ಕಿ – 1 ಲೋಟ
  • ತುಪ್ಪ – 5 ಚಮಚ
  • ಮೆಣಸು – 2 ಚಮಚ
  • ಜೀರಿಗೆ – 2 ಚಮಕ
  • ಶುಂಟಿ – 1 ಇಂಚು
  • ಗೋಡಂಬಿ – 10
  • ಕರಿಬೇವು – 10 ಎಲೆ
  • ಉಪ್ಪು – ರುಚಿಗೆ ತಕ್ಕಶ್ಟು
  • ನೀರು – 4 ಲೋಟ (ಅಕ್ಕಿಯ 4 ಪಟ್ಟು)

ಮಾಡುವ ಬಗೆ

ಕುಕ್ಕರ್ ಗೆ 1 ಲೋಟ ಹೆಸರುಬೇಳೆ ಹಾಗೂ 1 ಚಮಚ ತುಪ್ಪ ಹಾಕಿ ಹುರಿದುಕೊಳ್ಳಿ, ನಂತರ 1 ಲೋಟ ಅಕ್ಕಿ ಸೇರಿಸಿ 10 ಸೆಕೆಂಡ್ ಹುರಿಯಿರಿ. ಇದಕ್ಕೆ 4 ಲೋಟ ನೀರು, ½ ಚಮಚ ಉಪ್ಪು, 1 ಚಮಚ ಜೀರಿಗೆ, 1 ಚಮಚ ಮೆಣಸು ಹಾಕಿ ಕುಕ್ಕರ್ ಮುಚ್ಚಿ, 3 ವಿಶಲ್ ಕೂಗಿಸಿ.

ಒಗ್ಗರಣೆ: 1 ಚಮಚ ಜೀರಿಗೆ, 1 ಚಮಚ ಮೆಣಸು, ಕರಿಬೇವು, ಗೋಡಂಬಿ, 4 ಚಮಚ ತುಪ್ಪ ಹಾಗೂ ಸಣ್ಣದಾಗಿ ಕತ್ತರಿಸಿದ ಶುಂಟಿ ಹಾಕಿ ಒಗ್ಗರಣೆ ಮಾಡಿ. 3 ವಿಶಲ್ ಕೂಗಿದ ನಂತರ ಕುಕ್ಕರ್ ತೆಗೆದು ಸ್ವಲ್ಪ ನೀರು ಹಾಕಿ ಹದ ಮಾಡಿಕೊಳ್ಳಿ. ನಂತರ ಒಗ್ಗರಣೆ ಸೇರಿಸಿ, ಜೊತೆಗೆ ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಬೆರೆಸಿ. ಈಗ ಬೇಳೆ ಪೊಂಗಲ್ ಸಿದ್ದ. ತೆಂಗಿನಕಾಯಿ, ಹುರಿಗಡಲೆ, ಹುಣಸೆಹಣ್ಣು, ಶುಂಟಿ ಹಾಗೂ ಕರಿಬೇವು ಹಾಕಿ ಮಾಡಿದ ಚಟ್ನಿಯೊಂದಿಗೆ ಸವಿದರೆ ಇನ್ನೂ ಚೆನ್ನ. (ಈ ಚಟ್ನಿಗೆ ಕೊತ್ತಂಬರಿ ಸೊಪ್ಪು ಹಾಕಬಾರದು).

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: