ಟೊಮೋಟೊ ಪಚಡಿ
– ಸವಿತಾ.
ಬೇಕಾಗುವ ಸಾಮಾನುಗಳು
ಟೊಮೋಟೊ – 4
ಈರುಳ್ಳಿ – 1
ಬೆಳ್ಳುಳ್ಳಿ ಎಸಳು – 4
ಹಸಿ ಮೆಣಸಿನಕಾಯಿ – 3
ಎಣ್ಣೆ – 2 ಚಮಚ
ಜೀರಿಗೆ – 1/2 ಚಮಚ
ಪುದೀನಾ ಎಲೆ – 4
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ಬಗೆ
ಈರುಳ್ಳಿ ಮತ್ತು ಟೊಮೋಟೊ ಸಣ್ಣಗೆ ಕತ್ತರಿಸಿ ಇಟ್ಟುಕೊಳ್ಳಿ. ಹಸಿ ಮೆಣಸಿನಕಾಯಿ ಕತ್ತರಿಸಿ ಇಟ್ಟುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಜೀರಿಗೆ, ಕರಿಬೇವು, ಬೆಳ್ಳುಳ್ಳಿ ಎಸಳು ಬಿಡಿಸಿ ಹಾಕಿ ಹುರಿಯಿರಿ. ಕತ್ತರಿಸಿದ ಹಸಿ ಮೆಣಸಿನಕಾಯಿ ಹಾಕಿ ಹುರಿಯಿರಿ ನಂತರ ಟೊಮೋಟೊ ಹಾಕಿ ಉಪ್ಪು ಸೇರಿಸಿ ಹುರಿದು ಒಲೆ ಆರಿಸಿ. ತಣ್ಣಗಾದ ಮೇಲೆ ಕೊತ್ತಂಬರಿ ಸೊಪ್ಪು ಸ್ವಲ್ಪ ಸೇರಿಸಿ ಒಂದು ಸುತ್ತು ಮಿಕ್ಸರ್ ನಲ್ಲಿ ತಿರುಗಿಸಿ ತೆಗೆಯಿರಿ .(ಬಹಳ ನುಣ್ಣಗೆ ರುಬ್ಬುವುದೇನು ಬೇಡ). ಕತ್ತರಿಸಿದ ಈರುಳ್ಳಿ ಹಾಕಿ ಚೆನ್ನಾಗಿ ಕಲಸಿ. ನಾಲ್ಕು ಪುದೀನಾ ಎಲೆ ಕತ್ತರಿಸಿ ಮೇಲೆ ಹಾಕಿ.
ಈಗ ಟೊಮೋಟೊ ಪಚಡಿ ಸವಿಯಲು ಸಿದ್ದ. ಅನ್ನದ ಜೊತೆ ಚಪಾತಿ ಅತವಾ ಸೈಡ್ ಡಿಶ್ ಆಗಿ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು