ಕವಿತೆ: ಒಂದೇ ಮನೆ
– ವೆಂಕಟೇಶ ಚಾಗಿ.
ನಮಗೆಲ್ಲರಿಗೂ ಮನೆಯೊಂದೆ
ನಾವೆಲ್ಲರೂ ಮನುಜರೆಂದೆ
ಅಣ್ಣತಮ್ಮಂದಿರು ನಾವೆಲ್ಲ
ದ್ವೇಶ ಏತಕೆ ನಮಗೆಲ್ಲ?
ಮೇಲು ಕೀಳೆಂಬುದು ಬೇಕೇ?
ನೆಮ್ಮದಿ ಜೀವನವಿಲ್ಲಿ ಸಾಕೆ
ನೀವು ನಾವೆಲ್ಲ ನಾವು ನೀವೆಲ್ಲ
ನಗುತಲಿರೆ ಬದುಕೆ ಬೇವುಬೆಲ್ಲ
ಶಾಶ್ವತ ಎಂಬುದು ಇಲ್ಲಿಲ್ಲ
ಶಾಶ್ವತ ಅವರಿಲ್ಲ ಯಾರಿಲ್ಲ
ಹೊಂದಿಕೆಯಿಂದಲೆ ಬದುಕು
ದಕ್ಕಿದು ನಮಗಶ್ಟೇ ಸಾಕು
ಇದು ನಮ್ಮನೆ ನಮ್ಮೆಲ್ಲರ ಮನೆ
ಈ ಮನೆ ಕಟ್ಟಿ ಮಡಿದವರ ನೆನೆ
ಶಾಂತಿ ಸಹನೆಯ ಗೂಡು ಇದು
ನಮ್ಮ ಮತವೆಂದೂ ಕೇಳದು
ಆ ನಂಬಿಕೆ ಸುಳ್ಳಲ್ಲ; ಸುಳ್ಳು ನಿಲ್ಲಲ್ಲ
ಮನದೊಳಗೆ ಸತ್ಯವ ನೋಡೆಲ್ಲ
ಹಂಚಿ ತಿನ್ನುವ ಗುಣ ಬೆಳೆಸಿದರೆ
ಸ್ವರ‍್ಗವಾಗುವುದು ಮನೆ ದರೆ
(ಚಿತ್ರ ಸೆಲೆ: rawpixel.com)
ಇತ್ತೀಚಿನ ಅನಿಸಿಕೆಗಳು