ಬ್ರೆಡ್ ಮಲೈ

– ಸವಿತಾ.

ಬೇಕಾಗುವ ಸಾಮಾನುಗಳು

  • ಬ್ರೆಡ್ ಹೋಳು – 6
  • ಹಾಲು – 1 ಲೀಟರ‍್
  • ಕಾರ‍್ನ್ ಪ್ಲೋರ‍್ – 3 ಚಮಚ
  • ನೀರು – ಅರ‍್ದ ಲೋಟ
  • ಬಾದಾಮಿ – 8
  • ಏಲಕ್ಕಿ – 4
  • ಲವಂಗ – 4
  • ಸಕ್ಕರೆ ಅತವಾ ಬೆಲ್ಲ – 3 ಚಮಚ
  • ತುಪ್ಪ – 1 ಬಟ್ಟಲು

ಮಾಡುವ ಬಗೆ

ಮೊದಲಿಗೆ ಹಾಲು ಕುದಿಯಲು ಇಡಿ. ಆಮೇಲೆ ಕಾರ‍್ನ್ ಪ್ಲೋರ‍್ ಗೆ ನೀರು ಬೆರೆಸಿ ಚೆನ್ನಾಗಿ ಕಲಸಿ ಹಾಲಿಗೆ ಸೇರಿಸಿ, ಸಣ್ಣ ಉರಿಯಲ್ಲಿ ಕುದಿಸಿರಿ. ಇದಕ್ಕೆ ನಾಲ್ಕು ಬಾದಾಮಿ, ಏಲಕ್ಕಿ, ಲವಂಗವನ್ನು ಪುಡಿ ಮಾಡಿ ಸೇರಿಸಿ. ಇದರ ಮೇಲೆ ಉದುರಿಸಲು ಸ್ವಲ್ಪ ಬಾದಾಮಿಯನ್ನು ಸಣ್ಣದಾಗಿ ಕತ್ತರಿಸಿ ಪಕ್ಕಕ್ಕೆ ತೆಗೆದಿಡಿ. ನಂತರ ಸಕ್ಕರೆ ಹಾಕಿ ಸ್ವಲ್ಪ ದಟ್ಟ ಆಗುವಶ್ಟು ಕುದಿಸಿ ಒಲೆ ಆರಿಸಿ .  ಬ್ರೆಡ್ ಹೋಳುಗಳಿಗೆ ಎರಡು ಬದಿ ತುಪ್ಪ ಸವರಿ, ತವೆಗೆ ಒಂದು ಚಮಚ ತುಪ್ಪ ಹಾಕಿ ಎರಡು ಬದಿ ಬೇಯಿಸಿ ತೆಗೆಯಿರಿ. ಬ್ರೆಡ್ ಆರಿದ ನಂತರ ಅರ‍್ದ ಕತ್ತರಿಸಿ ಇಟ್ಟುಕೊಳ್ಳಿರಿ. ಈಗ ಅದರ ಮೇಲೆ ಕುದಿಸಿದ ಹಾಲಿನ ಮಿಶ್ರಣ ಸುರಿಯಿರಿ.ಇದರ ಮೇಲೆ ಬಾದಾಮಿ ಚೂರು ಉದುರಿಸಿ. ಈಗ ಬ್ರೆಡ್ ಮಲೈ ಸವಿಯಲು ಸಿದ್ದವಾಗಿದೆ.

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: