ನಿಂಬೆ ಹಣ್ಣಿನ ಕೆಂಪು ಚಟ್ನಿ

– ವಿಜಯಮಹಾಂತೇಶ ಮುಜಗೊಂಡ.

ಬೇಕಾಗುವ ಸಾಮಾನುಗಳು

ನಿಂಬೆ ಹಣ್ಣು – 2
ಬೆಲ್ಲ – 4 ಚಮಚ
ಜೀರಿಗೆ – 1 ಚಮಚ
ಬೆಳ್ಳುಳ್ಳಿ – 10-15 ಎಸಳು
ಕೆಂಪು ಮೆಣಸಿಕಾಯಿ – 10-15
ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಮೊದಲು ನಿಂಬೆ ಹಣ್ಣಿನ ಸಿಪ್ಪೆ ಸುಲಿದು ಕತ್ತರಿಸಿ, ಬೀಜ ತೆಗೆದು ಸ್ವಲ್ಪ ಉಪ್ಪು ಸೇರಿಸಿ ಇಟ್ಟುಕೊಳ್ಳಿ. ಒಣ ಕೆಂಪು ಮೆಣಸಿಕಾಯಿ ಬಳಸುವುದಾದರೆ, ಅರ್‍ದ ಗಂಟೆ ನೀರಿನಲ್ಲಿ ನೆನೆಸಿ ಇಟ್ಟುಕೊಳ್ಳಿ. ಹಸಿ ಕೆಂಪು ಮೆಣಸಿಕಾಯಿ ಆದರೆ ಬಾಣಲೆ ಮೇಲೆ ಸ್ವಲ್ಪ ಎಣ್ಣೆಯಲ್ಲಿ ಹುರಿದುಕೊಳ್ಳಿ. ತಣ್ಣಗಾದ ಮೇಲೆ, ಕತ್ತಿರಿಸಿದ ನಿಂಬೆ ಹಣ್ಣು, ಮೆಣಸಿಕಾಯಿ, ಜೀರಿಗೆ, ಬೆಳ್ಳುಳ್ಳಿ, ಉಪ್ಪು, ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಸ್ವಲ್ಪ ಸಣ್ಣಗಾದ ಮೇಲೆ ಪುಡಿ ಮಾಡಿದ ಬೆಲ್ಲ ಸೇರಿಸಿ ನುಣ್ಣಗಾಗುವವರೆಗೆ ರುಬ್ಬಿಕೊಳ್ಳಿ.

ತಯಾರಿಸಿದ 2-3 ದಿನಗಳ ನಂತರ ತಿನ್ನಲು ಚೆನ್ನಾಗಿರುತ್ತದೆ. ಬಿಸಿ ಅನ್ನ, ಚಪಾತಿ ಇಲ್ಲವೇ ರೊಟ್ಟಿಯ ಜೊತೆಗೆ ತುಪ್ಪ ಇಲ್ಲವೇ ಎಣ್ಣೆಯೊಂದಿಗೆ ನೆಂಚಿಕೊಳ್ಳಬಹುದು. ಇದನ್ನು ಒಂದು ವಾರದ ವರೆಗೆ ಬಳಸಬಹುದು, ತಂಪೆಟ್ಟಿಗೆಯಲ್ಲಿ ಇಟ್ಟರೆ 2-3 ತಿಂಗಳವರೆಗೆ ಹಾಳಾಗುವುದಿಲ್ಲ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: