ಮಾಡಿ ಸವಿಯಿರಿ ಹಣ್ಣುಗಳ ಜಾಮ್

– ಸವಿತಾ.

ಏನೇನು ಬೇಕು?

1 ಬಟ್ಟಲು ಸಿಪ್ಪೆ ತೆಗೆದು ಕತ್ತರಿಸಿದ ಸೇಬು ಹಣ್ಣಿನ ಹೋಳುಗಳು.
1 ಬಟ್ಟಲು ಪಪ್ಪಾಯಿ ಹಣ್ಣಿನ ಹೋಳುಗಳು.
1 ಬಟ್ಟಲು ಕಲ್ಲಂಗಡಿ ಹಣ್ಣಿನ ಹೋಳುಗಳು.
1 ಬಟ್ಟಲು ಸಕ್ಕರೆ.

ಮಾಡುವ ಬಗೆ:

ಹಣ್ಣುಗಳ ಸಿಪ್ಪೆ ತೆಗೆದು, ಬೀಜ ತೆಗೆದು ಸಣ್ಣ ಹೋಳುಗಳಾಗಿ ಕತ್ತರಿಸಿರಿ. ಒಂದು ಬಾಣಲೆಯನ್ನು ಸಣ್ಣ ಉರಿಯಲ್ಲಿ ಕಾಯಲು ಇಟ್ಟು ಎಲ್ಲಾ ಹಣ್ಣಿನ ಹೋಳುಗಳನ್ನು ಹಾಕಿ ಸಕ್ಕರೆಯನ್ನು ಸೇರಿಸಿರಿ. ಸಕ್ಕರೆ ಕರಗಿ ಹಣ್ಣಿನ ಹೋಳುಗಳು ಅದರಲ್ಲಿ ಸ್ವಲ್ಪ ಬೇಯಬೇಕು. ಸ್ವಲ್ಪ ಗಟ್ಟಿಯಾದ ಮೇಲೆ ಉರಿಯನ್ನು ಆರಿಸಿ. ತಣ್ಣಗಾದ ಮೇಲೆ ಬ್ರೆಡ್ ಅತವಾ ಚಪಾತಿ ಜೊತೆ ತಿನ್ನಲು ಜಾಮ್ ತಯಾರು. ಇದನ್ನು ಒಂದು ಡಬ್ಬಿಯಲ್ಲಿ ಗಾಳಿಯಾಡದ ಹಾಗೆ ಗಟ್ಟಿ ಮುಚ್ಚಳವನ್ನು ಹಾಕಿಟ್ಟರೆ 6 ರಿಂದ 7 ದಿನ ಬರುತ್ತದೆ.

(ಚಿತ್ರ ಸೆಲೆ: ಸವಿತಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks