ಕವಿತೆ: ನಿತ್ಯ ಕರ‍್ಮಿಣಿ

– ವಿನು ರವಿ.

ನಿತ್ಯ ಕರ‍್ಮಿಣಿ
ಈ ನಮ್ಮ ದರಣಿ

ಬಾಸ್ಕರನ ಬರಮಾಡಿಕೊಂಡು
ಬೆಳಕಾಗಿ ಹಸಿರ ನಗಿಸುತ್ತಾಳೆ
ಗಿರಿಶ್ರುಂಗಗಳ ಮೇಲೇರಿ
ಮೋಡಗಳ ಕರೆದು ಮಳೆಯಾಗಿಸುತ್ತಾಳೆ

ಬೇರನ್ನು ಮಣ್ಣಲ್ಲಿ ಬದ್ರವಾಗಿಸಿ
ಗಿಡದಲ್ಲಿ ಹೂವಾಗಿ ಅರಳುತ್ತಾಳೆ
ಹೊಚ್ಚ ಹೊಸ ಪಚ್ಚೆ ಪೈರಾಗಿ
ಅನ್ನದ ಶಕ್ತಿಯಾಗುತ್ತಾಳೆ

ಗಾಳಿಯಾಗಿ ಉಸಿರಾಗುತ್ತಾಳೆ
ಬೆಂಕಿಯಾಗಿ ಬೇಡದ್ದನ್ನು ಸುಟ್ಟು ಹಾಕುತ್ತಾಳೆ
ರುತು ರುತುವಿಗೂ ಹೊಸತೇನನ್ನೊ ದರಿಸಿ
ಸಿಂಗರಿಸಿ ಚೆಲುವಾಗಿ ಕಣ್ಣ ತುಂಬುತ್ತಾಳೆ

ನಿತ್ಯ ಕರ‍್ಮಿಣಿ
ಈ ನಮ್ಮ ದರಣಿ.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: