ತಟ್ಟನೆ ಮಾಡಿ ನೋಡಿ ಮೊಟ್ಟೆ ಬುರ‍್ಜಿ

– ನಿತಿನ್ ಗೌಡ.

ಬೇಕಾಗುವ ಸಾಮಾನುಗಳು

  • ಮೊಟ್ಟೆ – 6
  • ಈರುಳ್ಳಿ – 2 ರಿಂದ 3
  • ಟೊಮೋಟೋ – 1
  • ಹಸಿಮೆಣಸಿನ ಕಾಯಿ  – 6 (ಕಾರಕ್ಕೆ ತಕ್ಕಶ್ಟು)
  • ಕಾರದ ಪುಡಿ (ಹಸಿಮೆಣಸಿನ ಕಾಯಿ ಬೇಡದಿದ್ದಲ್ಲಿ) –  2 ರಿಂದ 3 ಚಮಚ  (ಕಾರಕ್ಕೆ ತಕ್ಕಶ್ಟು)
  • ಎಣ್ಣೆ – ಸ್ವಲ್ಪ
  • ರುಚಿಗೆ ತಕ್ಕಶ್ಟು ಉಪ್ಪು
  • ಅರಿಶಿನ ಪುಡಿ – 4 ಚಿಟಿಗೆ

ಮಾಡುವ ಬಗೆ

ಮೊದಲಿಗೆ ಈರುಳ್ಳಿ, ಟೋಮೊಟೊ ಮತ್ತು ಹಸಿಮೆಣಸಿನ ಕಾಯಿಯನ್ನು ಹೆಚ್ಚಿಟ್ಟುಕೊಳ್ಳಿರಿ. ಆಮೇಲೆ ಬಾಣಲಿಗೆ ಸ್ವಲ್ಪ ಎಣ್ಣೆಹಾಕಿ ಕಾಯಲು ಬಿಡಿ. ಎಣ್ಣೆ ಕಾಯುತ್ತಿದ್ದಂತೆ ಮೊದಲಿಗೆ ಈರುಳ್ಳಿ ಹಾಕಿ ಬಾಡಿಸಿಕೊಳ್ಳಿರಿ. ಆಮೇಲೆ ಹಸಿಮೆಣಸಿನಹಾಯಿ ಮತ್ತು ಟೋಮೋಟೋ ಹಾಕಿರಿ. ಈಗ ಉಪ್ಪು ಮತ್ತು ಅರಿಶಿನ ಪುಡಿಯನ್ನು ಹಾಕಿ ಬಾಡಿಸಿ. ಅರಿಶಿನ ಪುಡಿ ಮತ್ತು ಉಪ್ಪು ಟೊಮೋಟೋ ಮತ್ತು ಈರುಳ್ಳಿಯನ್ನು ಕೊಂಚ ಕರಗಿಸುತ್ತದೆ.
ಹಸಿಮೆಣಸು ಬೇಡವಾದಲ್ಲಿ, ಕಾರದ ಪುಡಿಯನ್ನು ಈ ಹಂತದಲ್ಲಿ ಹಾಕಿಕೊಳ್ಳಿರಿ. ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದ ಮೇಲೆ, ಒಲೆ ಉರಿಯನ್ನು ಕಡಿಮೆ ಮಾಡಿರಿ. ಈಗ ಮೊಟ್ಟೆಯನ್ನು ಒಂದೊಂದರಂತೆ ಒಡೆದು ಪಾತ್ರೆಗೆ ಹಾಕಿಕೊಳ್ಳಿರಿ. ಒಂದೊಂದೆ ಮೊಟ್ಟೆ ಒಡೆದು ಹಾಕುತ್ತಿದ್ದಂತೆ, ಜೊತೆಜೊತೆಗೆ ಸವುಟಿನಲ್ಲಿ ಚೆನ್ನಾಗಿ ಗೂರಾಡಿರಿ(ಅಲ್ಲಾಡಿಸಿ). ಹೀಗೆ ಮಾಡುವುದರಿಂದ ಬುರ‍್ಜಿಯ ಮೊಟ್ಟೆ ಪಾತ್ರೆಯ ತಳ ಹಿಡಿಯದೆ, ಉದುರುದುರಾಗಿ ಬರುವುದು. 5 – 8 ನಿಮಿಶ ಬೇಯಿಸಿ, ತೆಗೆಯಿರಿ. ಈಗ ಬಿಸಿ ಬಿಸಿ ಮೊಟ್ಟೆ ಬುರ‍್ಜಿ ಸವಿಯಲು ಸಿದ್ದವಾಗಿದ್ದು, ಅನ್ನ, ಚಪಾತಿ ಜೊತೆ ತಿನ್ನಬಹುದು.  ಚೆಂದ ಕಾಣಿಸಲು ಬೇಕಾದ್ದಲ್ಲಿ ಬುರ‍್ಜಿಯ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಬಹುದು.

 

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: