ಕವಿತೆ: ನೆನಪುಗಳೇ ಮಾಸದಿರಿ

– ವಿನು ರವಿ.

ನೆನಪುಗಳೇ
ಮಾಸದಿರಿ

ಪ್ರೀತಿಯಿಂದ
ಕರೆಯುವೆ
ಸದಾ ಜೊತೆಯಾಗಿರಿ

ಮನೆಯ ಮುಂದಿನ
ರಂಗೋಲಿ ಅಳಿಸಿಹೋದಂತೆ
ಇಬ್ಬನಿಯ ಹನಿಗಳು
ಜಾರಿ ಹೋದಂತೆ
ಮಳೆಯ ನೀರು
ಹರಿದು ಹೋದಂತೆ
ನೆನಪುಗಳೇ  ಮಾಸದಿರಿ
ಸದಾ ಜೊತೆಯಾಗಿರಿ

ನೋವುಗಳು
ಕಾಣದಂತೆ
ನಗುವಾಗ
ದುಕ್ಕ ಮರೆತು
ಹಗುರಾಗಲು ಬಯಸಿದಾಗ
ನೆನಪಗಳೇ ಮಾಸದಿರಿ
ಸದಾ ಜೊತೆಯಾಗಿರಿ

(ಚಿತ್ರಸೆಲೆ: fos.cmb.ac.lk )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: