ಕವಿತೆ: ಸ್ವಾತಂತ್ರ್ಯೋತ್ಸವ

 ಪ್ರವೀಣ್ ದೇಶಪಾಂಡೆ.

ಕೆಡುಕು ಕಡೆಯಾಗಲಿ
ಹುಳುಕು ಹಳತಾಗಲಿ
ಸುಳ್ಳು ಸೆಳದ್ಹೋಗಿ
ದಿಟವರಳಿ ಬೆಳಗಲಿ

ದಶದಿಕ್ಕುಗಳ ಪರಿದಿ
ದೇಗುಲದಂತ ದೇಶಕ್ಕೆ
ಏಕತೆ ಗೋಪುರವಾಗಲಿ
ಅಸ್ಮಿತೆಯ ಕಳಸ
ಮೂಲೋಕ ಗೋಚರವಾಗಲಿ

ಸುಮ್ಮನೆ ಸಿಕ್ಕಿದ್ದಲ್ಲ
ನೆಲಕೆ ನೆತ್ತರ ಮೆತ್ತಿ
ಜೀವಜೀವನವ ಉತ್ತಿ ಬಿತ್ತಿ
ತಂದಿತ್ತಿದ್ದು ಸ್ವಾತಂತ್ರ‍್ಯ
ಗೇಹಗಂದವ ತೇಯ್ದು
ಅದಕೀಗ ಎಪ್ಪತ್ತೈದು

ಎಲ್ಲದಕು ದುಡಿದುಡಿದು
ಹುಡಿಯಾಗುವ
ಮನಸು ಮೂಳೆ ಮಾಂಸದ
ಚೂರು ಈ ನೆಲದ ಮಣ್ಣೂ ಸೇರಲಿ
ಮನೆಮನೆಯ ಮೇಲೆ ಮೂರ‍್ಬಣ್ಣ
ಮನಮನದಲು ಪಡಪಡಿಸಿ ದೇಶಗಾತೆ
ಅಲ್ಲಿಗೆ ಸತ್ಯಮೇವ ಜಯತೆ

(ಚಿತ್ರ ಸೆಲೆ: freepik.com

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *