ಮೆಕ್ಕೆಜೋಳ ರವೆ ಪಡ್ಡು
– ಸವಿತಾ.
ಬೇಕಾಗುವ ಸಾಮಾನುಗಳು
- ಕಾಯು – ಅರ‍್ದ ಹೊಳಕೆ
- ಗೋದಿ ರವೆ – 1 ಲೋಟ
- ಮೊಸರು – ಅರ‍್ದ ಲೋಟ
- ಮೆಕ್ಕೆಜೋಳ – ಅರ‍್ದ ಲೋಟ
- ಈರುಳ್ಳಿ – ಅರ‍್ದ
- ಹಸಿ ಮೆಣಸಿನಕಾಯಿ – 1
- ಜೀರಿಗೆ – ಕಾಲು ಚಮಚ
- ಹಸಿ ಶುಂಟಿ – ಸ್ವಲ್ಪ
- ಉಪ್ಪು ರುಚಿಗೆ ತಕ್ಕಶ್ಟು
- ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ
- ಎಣ್ಣೆ – 1 ಲೋಟ
- ಅಡುಗೆ ಸೋಡಾ – ಒಂದು ಚಿಟಿಕೆ
- ಬೇಕಾದರೆ ಕರಿ ಬೇವು ಸ್ವಲ್ಪ , ಗಜ್ಜರಿ ತುರಿ ಸ್ವಲ್ಪ ಸೇರಿಸಬಹುದು
ಮಾಡುವ ಬಗೆ
ಮೊದಲಿಗೆ ಗೋದಿರವೆ ತೊಳೆದು ಮೊಸರು ಹಾಕಿ ಕಲಸಿಟ್ಟುಕೊಳ್ಳಿರಿ. ಮೆಕ್ಕೆಜೋಳ ಬೇಯಿಸಿ ನಂತರ ಕಾಳು ಬಿಡಿಸಿ ತೆಗೆದಿಡಿ. ಈಗ ಹಸಿ ಮೆಣಸಿನಕಾಯಿ, ಹಸಿ ಶುಂಟಿ, ಜೀರಿಗೆ, ಉಪ್ಪು ಸೇರಿಸಿ ಪೇಸ್ಟ್ ಮಾಡಿಟ್ಟುಕೊಳ್ಳಿರಿ. ಎರಡು ಚಮಚ ಎಣ್ಣೆ ಬಾಣಲೆಗೆ ಹಾಕಿ ಬಿಸಿ ಮಾಡಿ ಈ ಪೇಸ್ಟ್ ಹಾಕಿ ಹುರಿಯಿರಿ. ಈರುಳ್ಳಿ ಸಣ್ಣದಾಗಿ ಕತ್ತರಿಸಿ ಹಾಕಿ ಚೆನ್ನಾಗಿ ಹುರಿಯಿರಿ. ಕುದಿಸಿದ ಮೆಕ್ಕೆಜೋಳದ ಕಾಳು ಹಾಕಿ ಹುರಿದು ಒಲೆ ಆರಿಸಿ. ನಂತರ, ರವೆ ಮೊಸರಿಗೆ ಹಾಕಿ. ಉಪ್ಪು, ನೀರು ನೋಡಿ ಹಾಕಿಕೊಂಡು, ಸ್ವಲ್ಪ ಅಡುಗೆ ಸೋಡಾ ಮತ್ತು ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಪಡ್ಡಿನ ಹದ ಬರುವಶ್ಟು ಕಲಸಿ. ನಂತರ ಕಾದ ಪಡ್ಡಿನ ಹಂಚಿಗೆ ಎಣ್ಣೆ ಹಾಕಿ ಪಡ್ಡಿನ ಮಿಶ್ರಣ ಹಾಕಿ ಬೇಯಿಸಿ ತೆಗೆಯಿರಿ. ಈಗ ಮೆಕ್ಕೆಜೋಳ ರವೆ ಪಡ್ಡು ಸವಿಯಲು ಸಿದ್ದವಾಗಿದ್ದು, ಕೊಬ್ಬರಿ ಚಟ್ನಿ ಜೊತೆ ಸವಿಯಬಹುದು.
ಇತ್ತೀಚಿನ ಅನಿಸಿಕೆಗಳು