ಮಿನಿಹನಿಗಳು

ವೆಂಕಟೇಶ ಚಾಗಿ.

ಮಳೆ

ಆಗಾಗ
ಮಳೆಯಾಗಬೇಕು
ಮನದಲ್ಲಿ;
ಕೊಳೆ ತೊಳೆಯಲು..!!

*****

ನಗ

ನಿನ್ನ ಮೇಲೆ
ನಗ ಇಲ್ಲ
ಅದಕ್ಕಾಗಿ
ನೀನು
ನಗವಲ್ಲಿ..!!

*****

ಬುತ್ತಿ

ಬದುಕಿನ ಬುತ್ತಿಯೊಳಗೆ
ಯಾವುದೂ
ಬತ್ತಿಲ್ಲ ;
ಉಣ್ಣಬೇಕು
ನೆತ್ತಿ ಸುಡುವವರೆಗೆ..!!

*****

ಹರೆಯ

ಅರೇ,
ನಾ
ಅರಿಯಲಿಲ್ಲ
ನನ್ನ ಹರೆಯ..!!

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: