ತಟ್ಟನೆ ಮಾಡಿ ನೋಡಿ ಕಾರ ಕೋಳಿ
– ನಿತಿನ್ ಗೌಡ.
ಬೇಕಾಗುವ ಸಾಮಾನುಗಳು
- ಚಿಕನ್ – 1 ಕಿಲೋ
- ಕರಿ ಬೇವು – 1 ಎಸಳು
- ಕಾರದ ಪುಡಿ – 2-3 ಚಮಚ
- ಸೋಯಾ ಸಾಸ್ – ಕಾಲು ಕಪ್ಪು
- ಅರಿಶಣ – 1/2 ಚಮಚ
- ಶುಂಟಿ- ಬೆಳ್ಳುಳ್ಳಿ ಪೇಸ್ಟ್ – ಸ್ವಲ್ಪ
- ಹಸಿ ಮೆಣಸಿನ ಕಾಯಿ – 2
- ಕಾಳುಮೆಣಸು ಪುಡಿ – ಸ್ವಲ್ಪ (ಬೇಕಾದ್ದಲ್ಲಿ ಮಾತ್ರ)
- ಉಪ್ಪು – ರುಚಿಗೆ ತಕ್ಕಶ್ಟು
- ಕಾರದ ಪುಡಿ – 2 ಚಮಚ
- ಟೊಮೊಟೊ ಪ್ಯೂರಿ/ಗಸಿ – 2-3 ಟೊಮೊಟೊ / ಕಾಲು ಕಪ್ಪು
- ತುಪ್ಪ/ಎಣ್ಣೆ – 6-8 ಚಮಚ
- ನಿಂಬೆ ಹಣ್ಣು – ಅರ‍್ದ ಹೋಳು
ಮಾಡುವ ಬಗೆ
ಮೊದಲಿಗೆ ತೊಳೆದಿಟ್ಟ ಕೋಳಿಗೆ ಸ್ವಲ್ಪ ಉಪ್ಪು ಸವರಿಡಿ. ಆಮೇಲೆ ಒಂದು ಬಾಂಡಲಿಯಲ್ಲಿ ಸ್ವಲ್ಪ ತುಪ್ಪ/ಎಣ್ಣೆ ಹಾಕಿ, ಅದಕ್ಕೆ ಕೋಳಿ ಮಾಂಸ ಹಾಕಿ ಹುರಿಯಿರಿ. ಕೋಳಿ ಹುರಿಯುತ್ತಿದ್ದಂತೆ ಅದಕ್ಕೆ ಸ್ವಲ್ಪ ಅರಿಶಿಣ ಹಾಕಿ ದೊಡ್ಡ ಉರಿಯಲ್ಲಿ ಮತ್ತಶ್ಟು ಬಾಡಿಸಿ. ಈ ಹೊತ್ತಿನಲ್ಲಿ ಕೋಳಿ ನೀರು ಬಿಟ್ಟುಕೊಂಡರೆ, ಅದನ್ನು ಒಂದು ಲೋಟದಲ್ಲಿ ತೆಗೆದಿಟ್ಟುಕೊಳ್ಳಿರಿ. ಕೋಳಿ ಬಾಡಿಸಿದ ಮೇಲೆ ಇದನ್ನು ಒಂದು ತಟ್ಟೆಯಲ್ಲಿ ತೆಗೆದಿಟ್ಟುಕೊಳ್ಳಿರಿ.
ಈಗ ಇನ್ನೊಂದು ಕಡಾಯಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ; ಇದಕ್ಕೆ ಸ್ವಲ್ಪ ಕರಿಬೇವು, ಶುಂಟಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು (ಬೇಕಾದ್ದಲ್ಲಿ) ಹಾಕಿ ಹುರಿಯಿರಿ. ನಂತರ ಇದಕ್ಕೆ ಕಾರದ ಪುಡಿ ಹಾಕಿ ಚೂರು ಹುರಿಯಿರಿ. ಆಮೇಲೆ ಇದಕ್ಕೆ ಟೋಮೋಟೋ ಪ್ಯೂರಿ/ಗಸಿ ಹಾಕಿ, ಅಲ್ಲಾಡಿಸಿ. ನಂತರ ಇದಕ್ಕೆ ಸೋಯಾ ಸಾಸ್ ಹಾಕಿ ಅಲ್ಲಾಡಿಸಿ. ಈಗ, ಮೊದಲಿಗೆ ಕೋಳಿ ಹುರಿಯುವಾಗ ನೀರು ತೆಗೆದಿಟ್ಟುಕೊಂಡಿದ್ದರೆ ಅದನ್ನು ಇದಕ್ಕೆ ಸೇರಿಸಿ, ನಡು ಉರಿಯಲ್ಲಿ ಚೆನ್ನಾಗಿ ಹುರಿಯುತ್ತಾ ಕಲಸಿರಿ. ಈಗ ಇದಕ್ಕೆ ಹುರಿದ ಕೋಳಿ ತುಂಡುಗಳನ್ನು ಹಾಕಿ ಕಲಸಿಕೊಳ್ಳಿ. ಇದಕ್ಕೆ ಬೇಕಾದ್ದಲ್ಲಿ ಮಾತ್ರ ಸ್ವಲ್ಪ ಕಾಳುಮೆಣಸಿನ ಪುಡಿ ಹಾಕಿಕೊಳ್ಳಿರಿ. ಈಗ ಇದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸ ಹಿಂಡಿ. ಸ್ವಲ್ಪ ಹೊತ್ತು ಹುರಿಯಿರಿ. ಈಗ ಹುಳಿ-ಹುಳಿ ಕಾರ ಕಾರದಿಂದ ಕೂಡಿದ ಕಾರ ಕೋಳಿ ತಯಾರಿದ್ದು ಹಾಗೆಯೂ ತಿನ್ನಬಹುದು ಇಲ್ಲವೇ ಅನ್ನದ ಜೊತೆ ತಿನ್ನಬಹುದು.
ಇತ್ತೀಚಿನ ಅನಿಸಿಕೆಗಳು