ಮಾಡಿನೋಡಿ ಒಣಮೀನು ಗಸಿ
– ನಿತಿನ್ ಗೌಡ.
ಬೇಕಾಗುವ ಸಾಮಾನುಗಳು
- ಒಣ ಮೀನು (ನಂಗು/ ಸೊರ‍್ಲು) – 200 ಗ್ರಾಂ
- ಈರುಳ್ಳಿ – 1
- ಟೋಮೋಟೋ – 2-3
- ಅರಿಶಿಣ – ಸ್ವಲ್ಪ
- ಉಪ್ಪು ರುಚಿಗೆ ತಕ್ಕಶ್ಟು
- ಕಾಳುಮೆಣಸು ಪುಡಿ – 1 ಚಮಚ
- ಕಾರದ ಪುಡಿ – 3-4 ಚಮಚ
- ಬೆಳ್ಳುಳ್ಳಿ – 10-12 ಎಸಳು
- ಕರಿಬೇವು – ಸ್ವಲ್ಪ
- ಹುಣಸೆ ಹುಳಿ ರಸ – ಕಾಲು ಕಪ್
- ಎಣ್ಣೆ -ಸ್ವಲ್ಪ
ಮಾಡುವ ಬಗೆ
ಮೊದಲಿಗೆ ಒಣಮೀನನ್ನು ತೊಳೆದುಕೊಳ್ಳಿರಿ. ಆಮೇಲೆ, ಒಂದು ಬಾಣಲೆಗೆ ಸ್ವಲ್ಪ ಎಣ್ಣೆಹಾಕಿ, ಅದಕ್ಕೆ ಒಣಮೀನು ಹಾಕಿ ಹುರಿದು, ತೆಗೆದಿಡಿ. ಈಗ ಇನ್ನೊಂದು ಬಾಣಲೆಗೆ ಸ್ವಲ್ಪ ಎಣ್ಣೆ, ಜಜ್ಜಿದ ಬೆಳ್ಳುಳ್ಳಿ ಎಸಳು, ಕರಿಬೇವು ಹಾಕಿ ಬಾಡಿಸಿ. ಆಮೇಲೆ ಈರುಳ್ಳಿ ಹಾಕಿ ಬಾಡಿಸಿ. ಟೋಮೋಟೋ , ಅರಿಶಿಣ, ಕಾಳುಮೆಣಸು ಪುಡಿ ಮತ್ತು ಕಾರದ ಪುಡಿ ಹಾಕಿರಿ. ಟೋಮೋಟೋ ಚೆನ್ನಾಗಿ ಕರಗುವವರೆಗೆ ಬೇಯಿಸಿ. ಆಮೇಲೆ ಹುಳಿರಸವನ್ನು ಇದಕ್ಕೆ ಹಾಕಿ ಅಲ್ಲಾಡಿಸಿ. ಆಮೇಲೆ ಇದಕ್ಕೆ ಚೂರು ನೀರು ಹಾಕಿಕೊಂಡು, ಅದಕ್ಕೆ ಹುರಿದ ಒಣಮೀನುಗಳನ್ನು ಹಾಕಿರಿ. ಈಗ ಇದನ್ನು ಕಲಸಿ, ಒಂದು 5-8 ನಿಮಿಶ ಬೇಯಿಸಿ ತೆಗೆಯಿರಿ. ಬೇಕಾದರೆ ಇದರಲ್ಲಿ ಉಪ್ಪು/ಕಾರ ಹದಕ್ಕೆ ಹಾಕಿಕೊಳ್ಳಬಹುದು. ಒಣಮೀನಿನಲ್ಲಿ ಮೊದಲೇ ಉಪ್ಪು ಇರುತ್ತದೆಯಾದ್ದರಿಂದ, ಮೊದಲಿಗೆ ಉಪ್ಪು ಹಾಕಿಕೊಳ್ಳದೇ ಇರುವುದೇ ಒಳ್ಳೆಯದು. ಈಗ ಒಣಮೀನಿನ ಕಾರದ ಗಸಿ ತಯಾರಿದ್ದು, ಹುಡಿ ಅನ್ನದ ಜೊತೆ ತಿನ್ನಬಹುದು.
ಇತ್ತೀಚಿನ ಅನಿಸಿಕೆಗಳು