ಕವಿತೆ: ದೀಪದ ಹಬ್ಬ

– ಸವಿತಾ.

ಎಣ್ಣೆ-ಬತ್ತಿ ಜೊತೆಯಾಗಿ
ಬೆಳಕು ಮೂಡಿತು
ದೀಪದಾಸರೆಯಲಿ
ಕತ್ತಲೆ ಸರಿಯಿತು

ಮನದ ದುಗುಡವ ನೀಗಿಸಿ
ಚೈತನ್ಯವ ಹರಿಸಿತು
ಬೆಳಕಿನ ಹಬ್ಬದಿ
ಬಾವಗಳ ಸಮ್ಮಿಲನವಾಯಿತು

ಕಶ್ಟ ಕೋಟಲೆಗಳು ಮೀರಿ
ಬದುಕಲು ಪ್ರೀತಿಯೊಂದಿರಲಿ ಎಂದಿತು
ಸಹನೆ, ತಾಳ್ಮೆಯಲಿ
ದೀಪದ ಹಬ್ಬ ಸುಕಮಯವಾಯಿತು

(ಚಿತ್ರಸೆಲೆ : pixahive.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: