ಕವಿತೆ: ಎಂದೋ ಅರಳಿದ ಮೈತ್ರಿ
– ವಿನು ರವಿ.
ಎಂದೋ ಸುರಿದ
ಮಳೆ ಹನಿಗಳು
ಇಂದು ಹೊನಲಾಗಿ
ಹರಿಯುತ್ತಿದೆ
ಎಂದೋ ಮೂಡಿದ
ಬಾವವೊಂದು
ಇಂದು ಹಾಡಾಗಿ
ಹೊಮ್ಮುತ್ತಿದೆ
ಎಂದೋ ಕಾಡಿದ
ಬಾವವೊಂದು
ಇಂದು ಚಿತ್ರವಾಗಿ
ಮೂಡುತ್ತಿದೆ
ಎಂದೋ ಕೇಳಿದ
ಮಾತೊಂದು
ಇಂದು ನೆನಪಾಗಿ
ಕಾಡುತ್ತಿದೆ
ಎಂದೋ ಅರಳಿದ
ಮೈತ್ರಿ ಇಂದು
ಒಲವಾಗಿ ಮಿಡಿಯುತ್ತಿದೆ
( ಚಿತ್ರಸೆಲೆ: pexels.com )
ಇತ್ತೀಚಿನ ಅನಿಸಿಕೆಗಳು