ತಟ್ಟನೆ ಮಾಡಿ ಸವಿಯಿರಿ ಚಾಕೊಲೇಟ್ ಉಂಡೆ

– ಸವಿತಾ.

ಬೇಕಾಗುವ ಸಾಮಾನುಗಳು

  • ಕೊಕೊ ಪುಡಿ – 1 ಲೋಟ
  • ಹಾಲು – 1 ಲೋಟ
  • ಗೋದಿ ಹಿಟ್ಟು – 2 ಚಮಚ
  • ಕಾಪಿ ಪುಡಿ (ಇನ್ಸ್ಟಂಟ್ ನೆಸ್ಕಾಪಿ ಅತವಾ ಬ್ರು ) – 1 ಚಮಚ
  • ಸಕ್ಕರೆ – 1 ಲೋಟ
  • ಬೆಣ್ಣೆ – 2 ಚಮಚ

ಮಾಡುವ ಬಗೆ

ಮೊದಲಿಗೆ ಹಾಲನ್ನು ಕಾಯಲಿಡಿ. ಆಮೇಲೆ ಇದಕ್ಕೆ ಕೊಕೊ ಪುಡಿ, ಸಕ್ಕರೆ ಹಾಕಿರಿ. ಆಮೇಲೆ ಗೋದಿ ಹಿಟ್ಟು ಹಾಕಿ ಚೆನ್ನಾಗಿ ತಿರುಗಿಸಿ. ಬೆಣ್ಣೆ ಹಾಕಿ ಗಟ್ಟಿಯಾಗುವವರೆಗೆ ಕುದಿಸಿ ಒಲೆ ಆರಿಸಿ. ಈಗ ನಿಮಗೆ ಬೇಕಾದ ಆಕಾರ ಕೊಟ್ಟು ಚಾಕೊಲೇಟ್ ಕತ್ತರಿಸಿಟ್ಟುಕೊಳ್ಳಿರಿ ಅತವಾ ಕೈಯಿಂದ ದುಂಡನೆಯ ಉಂಡೆ ಮಾಡಿಕೊಳ್ಳಿ. ಈಗ ಚಾಕೊಲೇಟ್ ಉಂಡೆ ಸವಿಯಲು ಸಿದ್ದವಾಗಿದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: