ಕವಿತೆ: ಚಿತ್ತಾರ
– ರಾಜೇಶ್.ಹೆಚ್.
ಬಾನಿನೆತ್ತರದಿ ಚಿತ್ತಾರ ಮೂಡಿಸಿ
ನೀ ಹಾರಿ ಬಂದೆ ಓ ಒಲವೇ
ಮನಸ್ಸಿನಲ್ಲಿ ಉಲ್ಲಾಸ ಮೂಡಿಸಿ
ಮನದ ಅಂಗಳದಲಿ ತೇಲಾಡುತ್ತಿರುವೆ
ಪಕ್ಶಿಯೋ ನೀನು ಮನದನ್ನೆಯೋ ನೀನು
ಪಕ್ಶಿಯ ಆಕಾರ ಹೂವಿನ ಗಾತ್ರ
ತಳೆದು ಬಂದೆ ಈ ಬುವಿಗೋ
ಇಲ್ಲ ನನ್ನ ಜೀವನಕೋ
ಹೇಳು ಒಲವೇ ಅದೇಕೆ ಮೌನ
ಕೊಲ್ಲುತಿದೆ ನಿನ್ನೀ ನೀರವ ಮೌನ
ಕೋಪವೇ ನನ್ನಲ್ಲಿ ಹೇಳೆನ್ನ ಮನದನ್ನೆ
ಕೇವಲ ಒಂದು ಬಾರಿ ಈ ಮೌನವ ಮುರಿ
ನನ್ನಲ್ಲಿ ಒಂದಕ್ಶರ ಮಾತಾಡು ಸಾಕು
ನಿನ್ನ ಪದಗಳೇ ಎನಗೆ ಚಿತ್ತಾರ
ನಿನ್ನ ಮೌನ ಮ್ರುತ್ಯುವಿನ ಜೇಂಕಾರ
ಉಲಿಯುತ್ತಿರು ಹನಿಗವನಗಳ
ಮಾಡೆನ್ನ ಮತ್ತು ನಿನ್ನ ಜೀವನ ಸಾಕಾರ.
( ಚಿತ್ರ ಸೆಲೆ: pixabay.com )
Beautiful poem