ಕವಿತೆ: ಹೊಸ ವರುಶದ ಹೊಸ ಹಾದಿಯಲಿ

– ಶ್ಯಾಮಲಶ್ರೀ.ಕೆ.ಎಸ್.

ನಾಳೆಗಳ ಹೊಸತನದ ಸಿರಿಯಲಿ
ನೆನ್ನೆಗಳ ನೆನಪು ಮಾಸದಿರಲಿ

ಕಹಿ ನೆನಪಿನ ಕರಿಚಾಯೆ
ಬಾಳಿನ ದಾರಿಯಲಿ ಮೂಡದಿರಲಿ

ಹಳತು ಕೊಳೆತ ನೋವುಗಳು
ಮತ್ತೆಂದೂ ಮರಳದಿರಲಿ

ಬಾವಗಳ ಗುದ್ದಾಟದಲ್ಲಿ
ಸಂತಸಕೇ ಮೇಲುಗೈ ಇರಲಿ

ನೂರು ವಸಂತಗಳು ಉರುಳಿದರೂ
ಬರವಸೆಗಳು ಬತ್ತದಿರಲಿ

ನಿರೀಕ್ಶೆಗಳು ಹುಸಿಯಾದಾಗ
ಆತ್ಮಸ್ತೈರ‍್ಯ ಕುಗ್ಗದಿರಲಿ

ಬದುಕಿನ ತೇರನು ಎಳೆಯಲು
ಹುಮ್ಮಸ್ಸು ಇಮ್ಮಡಿಯಾಗಲಿ

ಹೊಸ ವರುಶದ ಹೊಸ ಹಾದಿಯಲಿ
ಹೊಸ ಹುರುಪೊಂದು ಜೊತೆಯಾಗಲಿ

(ಚಿತ್ರ ಸೆಲೆ: publicdomainpictures.net)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Amrutha P B says:

    ಸೊಗಸಾದ ಕವಿತೆ

ಅನಿಸಿಕೆ ಬರೆಯಿರಿ: