ಹಾಯ್ಕುಗಳು: ತಾಯಿ

– ವೆಂಕಟೇಶ ಚಾಗಿ.

 

ತಾಯಿ ಮತ್ತು ಮಗು

ದುಡ್ಡು ಕೊಟ್ಟರೂ
ಸಿಗದ ಸೌಬಾಗ್ಯವು
ತಾಯಿ ಮಮತೆ

***

ಮತ್ತಾರೂ ಇಲ್ಲ
ತ್ಯಾಗದ ಪ್ರತಿರೂಪ,
ತಾಯಿ ಬಿಟ್ಟರೆ

***

ಸಾಕಿ ಸಲುಹಿ
ನೋವು ನುಂಗುವವಳು
ಕರುಣಾಮಯಿ

***

ಆಕೆ ನಕ್ಕರೆ
ಜಗವು ನಲಿವುದು
ಅಕಾಲ ಸತ್ಯ

***

ಅವಳ ಮಾತೇ
ಅಮ್ರುತದ ಸುದೆಯು
ಆಕೆ ಮಾತಾಯಿ

(ಚಿತ್ರ ಸೆಲೆ:pixabay)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: