ಕರಿದ ಬಿಸ್ಕತ್ತು

– ಸವಿತಾ.

ಬೇಕಾಗುವ ಸಾಮಾನುಗಳು

  • ಗೋದಿ ಹಿಟ್ಟು – 1 ಲೋಟ
  • ಹಸಿ ಕೊಬ್ಬರಿ ತುರಿ – 1 ಲೋಟ
  • ಸಕ್ಕರೆ ಅತವಾ ಜಜ್ಜಿದ ಬೆಲ್ಲ – 1/2 ಲೋಟ ( ಸಿಹಿ ಹೆಚ್ಚು ಬೇಕಾದಲ್ಲಿ 1 ಲೋಟ ಹಾಕಿ ಕೊಳ್ಳಿ )
  • ತುಪ್ಪ – 3 ಚಮಚ
  • ಜೀರಿಗೆ – 1/2 ಚಮಚ
  • ಉಪ್ಪು – 1/2 ಚಮಚ
  • ಒಣ ಕಾರದ ಪುಡಿ – 1/2 ಚಮಚ
  • ಕರಿಯಲು ಎಣ್ಣೆ

ಮಾಡುವ ಬಗೆ

ಮೊದಲಿಗೆ ಹಸಿ ಕೊಬ್ಬರಿ ತುರಿದು ಮಿಕ್ಸರ್‍‍ನಲ್ಲಿ ರುಬ್ಬಿ ತೆಗೆಯಿರಿ. ಇದಕ್ಕೆ ಸಕ್ಕರೆ ಅತವಾ ಜಜ್ಜಿದ ಬೆಲ್ಲ ಸೇರಿಸಿ ಅರ‍್ದ ಗಂಟೆ ಇಟ್ಟು ಬಿಡಿ. ಆಮೇಲೆ ಇದಕ್ಕೆ ಉಪ್ಪು, ಜೀರಿಗೆ ಸ್ವಲ್ಪ ಪುಡಿ ಮಾಡಿ ಸೇರಿಸಿ. ಒಣ ಕಾರದ ಪುಡಿಯನ್ನು ಹಾಕಿ ಚೆನ್ನಾಗಿ ಕಲಸಿಕೊಂಡು, ಗೋದಿ ಹಿಟ್ಟು, ತುಪ್ಪ ಸ್ವಲ್ಪ ಹಾಕಿ ಚೆನ್ನಾಗಿ ಕಲಸಿಟ್ಟುಕೊಳ್ಳಿರಿ. ಬೇಕಾದರೆ ಏಲಕ್ಕಿ ಪುಡಿ, ಕತ್ತರಿಸಿದ ಗೋಡಂಬಿ ಸೇರಿಸಬಹುದು. ಆಮೇಲೆ ತುಪ್ಪ ಹಚ್ಚಿ ಲಟ್ಟಿಸಿ ಬೇಕಾದ ಆಕಾರಕ್ಕೆ ಕತ್ತರಿಸಿ ಕಾದ ಎಣ್ಣೆಯಲ್ಲಿ(ಸಣ್ಣ ಉರಿಯಿಟ್ಟುಕೊಳ್ಳಿ) ಹೊಂಬಣ್ಣ ಬರುವವರೆಗೆ ಕರಿದು ತೆಗೆಯಿರಿ. ಈಗ ಮನೆಯಲ್ಲಿ ತಯಾರಿಸಿದ ಆರೋಗ್ಯಕರ ಬಿಸ್ಕಿಟ್ ಸವಿಯಲು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: