ಕವಿತೆ: ತಾಳ್ಮೆ
– ವೆಂಕಟೇಶ ಚಾಗಿ.
ಹಗಲು ಮೂಡುವ ತನಕ
ಬೆಳಕು ಹರಿಯುವ ತನಕ
ತಾಳುವ ಮನವಿರಲಿ ನಿನ್ನೊಳಗೆ
ಬೆಳಕಿನೊಳಗೆ ಬದುಕ ಕಟ್ಟಿ
ಕೈಯೊಳಗೆ ಹಸಿವರಿತ ರೊಟ್ಟಿ
ಸಿಗುವ ತನಕ ತಾಳ್ಮೆ ಇರಲಿ ನಿನಗೆ ||
ಕರಗುತಿಹುದು ಈ ಸಮಯ
ಇಂದು ಎಂಬುದು ನಾಳೆ ಮಾಯ
ಬರುವುದೆಲ್ಲ ಬರಲಿ ಈ ಜಗದೊಳಗೆ
ಪ್ರತಿದಿನವೂ ಪ್ರತಿಕ್ಶಣವೂ ಹೊಸತು
ನೆನಪಲ್ಲಿ ಉಳಿದದ್ದು ಹಳತು
ಉಳಿದಿರಲಿ ತಾಳ್ಮೆ ಒಳಗೊಳಗೆ ||
ಬಡವನಾರು ಸಿರಿವಂತನಾರು
ಕೇಳುವವರಾರು ಈ ನಿನ್ನ ದೂರು
ಕೊಡುವನು ಅವನೇ ಅದುವೆ ನ್ಯಾಯ
ನಿನಗೂ ಉಂಟು ಜವಾಬ್ದಾರಿ
ಅದುವೆ ನಿನಗೆ ಬದುಕ ದಾರಿ
ಉಳಿತಾಯದೊಳಗೆ ತಾಳ್ಮೆ ನ್ಯಾಯ ||
ಶಕ್ತಿ ಇರುವ ತನಕ ಕಟ್ಟು
ನಿನ್ನ ಗುರಿಯನು ನೀ ಮುಟ್ಟು
ಹೇಳರು ಈ ಗುಟ್ಟು ಬದುಕೊಳಗೆ
ಕರಗುವಲಿ ಕರಗಿ ಬಿಡು
ಬೆಳಗುವಲಿ ಬೆಳಗಿಬಿಡು
ತಾಳ್ಮೆ ಇರಲಿ ಬದುಕ ಸುಳಿಯೊಳಗೆ ||
( ಚಿತ್ರ ಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು