ಹೆಸರು ಬೇಳೆ ದೋಸೆ
– ಸವಿತಾ.
ಬೇಕಾಗುವ ಸಾಮಾನುಗಳು
- ಹೆಸರು ಬೇಳೆ – 1 ಲೋಟ
- ಅಕ್ಕಿ – 1/2 ಲೋಟ
- ಉಪ್ಪು – ರುಚಿಗೆ ತಕ್ಕಶ್ಟು
ಮಾಡುವ ಬಗೆ
ಅಕ್ಕಿ ಮತ್ತು ಹೆಸರು ಬೇಳೆ ತೊಳೆದು 4-5 ತಾಸು ನೆನೆ ಹಾಕಿ ಇಡಿ. ನಂತರ ಸ್ವಲ್ಪ ನೀರು ಸೇರಿಸಿ ನುಣ್ಣಗೆ ಮಿಕ್ಸರ್ ನಲ್ಲಿ ರುಬ್ಬಿಕೊಳ್ಳಿ. ಅಕ್ಕಿ ಹಿಟ್ಟಿನ ಹಾಗೆ ಹುದುಗು ಬರುವವರೆಗೆ ಇಡದೇ ತಕ್ಶಣ ದೋಸೆ ಮಾಡುವ ಬಗೆಯಿದು. ಸ್ವಲ್ಪ ರುಚಿಗೆ ಉಪ್ಪು ಸೇರಿಸಿ ಕಾದ ತವೆಯ ಮೇಲೆ ತುಪ್ಪ ಅತವಾ ಎಣ್ಣೆ ಹಚ್ಚಿ, ತೆಳುವಾದ ಗರಿಗರಿ ದೋಸೆ ಹಾಕಿ, ಎರಡೂ ಬದಿ ಬೇಯಿಸಿ ತೆಗೆಯಿರಿ. ಈಗ ಹೆಸರು ಬೇಳೆ ದೋಸೆ ಸವಿಯಲು ಸಿದ್ದ. ಚಟ್ನಿ ಅತವಾ ಪಲ್ಯದ ಜೊತೆ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು