ಸಿಂಪಲ್ ಬಿರಿಯಾನಿ

– ಕಿಶೋರ್ ಕುಮಾರ್.

ಏನೇನು ಬೇಕು

  • ಚರ್‍ಮ ತೆಗೆದ ಕೋಳಿ – ½ ಕಿಲೋ
  • ಅಕ್ಕಿ – ½ ಕಿಲೋ
  • ಶುಂಟಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
  • ತುಪ್ಪ/ ಅಡುಗೆ ಎಣ್ಣೆ – ಸ್ವಲ್ಪ
  • ಪಲಾವ್ ಎಲೆ – 2
  • ಈರುಳ್ಳಿ -2
  • ಟೊಮೆಟೊ – 4
  • ಹಸಿಮೆಣಸಿನಕಾಯಿ – 5
  • ಕೆಂಪು ಮೆಣಸಿನಕಾಯಿ ಪುಡಿ – 1 ಚಮಚ
  • ಅರಿಶಿಣ ಪುಡಿ – ½ ಚಮಚ
  • ಕೊತ್ತಂಬರಿ ಪುಡಿ – 1 ಚಮಚ
  • ಗರಂ ಮಸಾಲ – 2 ಚಮಚ
  • ಲವಂಗ – 4
  • ಚಕ್ಕೆ – 2 ಇಂಚು
  • ಏಲಕ್ಕಿ – 4
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಪುದೀನ – ಸ್ವಲ್ಪ
  • ಮೊಸರು – ½ ಕಪ್

ಮಾಡುವ ಬಗೆ

ಕುಕ್ಕ‍ರ್ ಗೆ ತುಪ್ಪ ಹಾಕಿ ಕಾಯಿಸಿ, ಕಾದ ಮೇಲೆ ಪಲಾವ್ ಎಲೆ, ಲವಂಗ, ಏಲಕ್ಕಿ ಹಾಕಿ ಹುರಿಯಿರಿ. ನಂತರ ಕತ್ತರಿಸಿಟ್ಟಿದ್ದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ ಚೆನ್ನಾಗಿ ಹುರಿಯಿರಿ. ಈಗ ಶುಂಟಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿಯಿರಿ. ಈಗ ಕೆಂಪು ಮೆಣಸಿನಕಾಯಿ ಪುಡಿ ಸೇರಿಸಿ. ಈಗ ಕತ್ತರಿಸಿದ ಟೊಮೆಟೋ ಸೇರಿಸಿ ಚೆನ್ನಾಗಿ ಹುರಿದು, ಕೋಳಿ ಮಾಂಸವನ್ನು ಸೇರಿಸಿ. ನಂತರ ಮೊಸರು ಸೇರಿಸಿ ಚೆನ್ನಾಗಿ ಕಲಸಿ, ಈಗ ಕೊತ್ತಂಬರಿ ಸೊಪ್ಪು, ಪುದೀನ ಸೇರಿಸಿ. ಈಗ ಗರಂ ಮಸಾಲ ಹಾಗೂ ಅರಿಶಿಣ ಪುಡಿ ಸೇರಿಸಿ ಕಡಿಮೆ ಉರಿಯಲ್ಲಿ 20 ನಿಮಿಶ ಬೇಯಿಸಿ. ನಂತರ ಅಕ್ಕಿಯ ಎರಡರಶ್ಟು ನೀರು ಸೇರಿಸಿ 10 ನಿಮಿಶ ಕುದಿಯುವವರೆಗೆ ಬೇಯಿಸಿ. ಈಗ ತೊಳೆದಿಟ್ಟಿದ್ದ ಅಕ್ಕಿಯನ್ನು ಸೇರಿಸಿ ಕುಕ್ಕ‍ರ್ ಮುಚ್ಚಿ ಎರಡು ವಿಶಲ್ ಹೊಡೆಸಿ, ಕುಕ್ಕ‍ರ್ ಮುಚ್ಚುಳ ತೆಗೆದಮೇಲೆ ಮಸಾಲೆ ಒಂದೇ ಕಡೆ ಉಳಿಯದಂತೆ, ಚೆನ್ನಾಗಿ ಕಲಸಿ. ಈಗ ಸಿಂಪಲ್ ಬಿರಿಯಾನಿ ಸವಿಯಲು ರೆಡಿ.

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks