ಶೇಂಗಾ ಚಾಟ್

– ಸವಿತಾ.

ಬೇಕಾಗುವ ಸಾಮಾನುಗಳು

  • ಕಡಲೇ ಬೀಜ – 2 ಬಟ್ಟಲು
  • ಆಲೂಗಡ್ಡೆ – 1
  • ಹುಣಸೆಹಣ್ಣು – 1/2 ನಿಂಬೆ ಹಣ್ಣಿನ ಅಳತೆ
  • ಟೊಮೆಟೊ – 2
  • ಈರುಳ್ಳಿ – 1
  • ಕ್ಯಾರೆಟ್ (ಗಜ್ಜರಿ) – 1
  • ಕೊತ್ತಂಬರಿ ಸೊಪ್ಪು ಸ್ವಲ್ಪ
  • ಬೆಲ್ಲ – 1 ಚಮಚ (ಅತವಾ ಕರ‍್ಜೂರ – 3)
  • ಹಸಿ ಮೆಣಸಿನಕಾಯಿ – 1
  • ಕರಿ ಮೆಣಸಿನ ಪುಡಿ – 1/4 ಚಮಚ
  • ಗರಮ್ ಮಸಾಲೆ ಪುಡಿ – 1/4 ಚಮಚ
  • ಚಾಟ್ ಮಸಾಲೆ ಪುಡಿ – 1/4 ಚಮಚ
  • ಒಣ ಕಾರದ ಪುಡಿ – 1/4 ಚಮಚ
  • ಉಪ್ಪು ರುಚಿಗೆ ತಕ್ಕಶ್ಟು
  • ತುಪ್ಪ – 1 ಚಮಚ
  • ಸಾಸಿವೆ – 1/4 ಚಮಚ
  • ಜೀರಿಗೆ – 1/4 ಚಮಚ
  • ಕರಿ ಬೇವು ಸ್ವಲ್ಪ

ಮಾಡುವ ಬಗೆ

ಮೊದಲಿಗೆ ಕಡಲೇ ಬೀಜ ಮತ್ತು ಹುಣಸೆಹಣ್ಣು ಬೇರೆ ಬೇರೆಯಾಗಿ ಒಂದು ತಾಸು ನೆನೆಸಿಟ್ಟುಕೊಳ್ಳಬೇಕು.ಆಮೇಲೆ ಕಡಲೇ ಬೀಜ, ಆಲೂಗಡ್ಡೆಯನ್ನು ಕುಕ್ಕರ್ ನಲ್ಲಿ ಕುದಿಸಿ ತೆಗೆಯಿರಿ. ಒಂದು ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಕರಿ ಬೇವು, ಕತ್ತರಿಸಿದ ಹಸಿಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ. ಇದಕ್ಕೆ ಹುಣಸೆ ರಸ ಸೇರಿಸಿ. ಕರ‍್ಜೂರ ಕುಟ್ಟಿ ಸೇರಿಸಿ ಇಲ್ಲವೆ ಬೆಲ್ಲ ಹಾಕಿ ಕುದಿಸಿ. ಉಪ್ಪು, ಕಾರ, ಕರಿ ಮೆಣಸಿನ ಪುಡಿ, ಗರಮ್ ಮಸಾಲೆ ಪುಡಿ ಮತ್ತು ಅರಿಶಿನ ಬೇಕಾದಲ್ಲಿ ಹಾಕಿ.

ಆಮೇಲೆ ಆಲೂಗಡ್ಡೆಯ ಸಿಪ್ಪೆಯನ್ನು ತೆಗೆದು, ಸಣ್ಣ ಹೋಳುಗಳಾಗಿ ಕತ್ತರಿಸಿ ಹಾಕಿ. ಆಮೇಲೆ ಕುದಿಸಿದ ಕಡಲೇ ಬೀಜ ಸೇರಿಸಿ, ತಿರುಗಿಸಿ ಒಲೆ ಆರಿಸಿ. ಇದನ್ನು ಒಂದು ತಟ್ಟೆಗೆ ಹಾಕಿಕೊಂಡು ಚಾಟ್ ಪುಡಿ ಸ್ವಲ್ಪ ಉದುರಿಸಿ. ನಂತರ ಟೊಮೆಟೊ, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿ ಮೇಲೆ ಹಾಕಿ, ತಿನ್ನಲು ಕೊಡಿ. ಉಪ್ಪು, ಕಾರ, ಮಸಾಲೆ ಪುಡಿ ನಿಮ್ಮ ಇಶ್ಟದಂತೆ ಹಾಕಿಕೊಂಡು ಸವಿಯಿರಿ(ಟೊಮೆಟೊ ಸಾಸ್ ಬೇಕಾದರೂ ಹಾಕಿಕೊಳ್ಳಬಹುದು).

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: