ಕವಿತೆ: ಇದುವೆ ರಾಜಕೀಯ
– ಮಹೇಶ ಸಿ. ಸಿ.
ಕೊಳಕು ರಾಜಕೀಯ ಇದುವೆ
ಹೊಲಸು ರಾಜಕೀಯ
ಕೊಳಕು ರಾಜಕೀಯ ಇದುವೆ
ಹೊಲಸು ರಾಜಕೀಯ
ಕೈಕಾಲು ಹಿಡಿದು ಬೇಡಿಕೊಳ್ಳುವ
ಬಿಕ್ಶೆ ರಾಜಕೀಯ
ಗೆದ್ದು ಬಂದವರೆ ಒದ್ದು ಬೆಳೆಯುವ
ಕ್ರೋದ ರಾಜಕೀಯ
ಎಲ್ಲರಿಂದಲೂ ಬೆಳೆದೆವೆಂಬುದ
ಮರೆಯೋ ರಾಜಕೀಯ
ಇದುವೆ ಹೊಲಸು ರಾಜಕೀಯ
ಬರವಸೆ ಬೆಳಕ ಹೊತ್ತಿಸುವಂತ
ಬರವಸೆಯೇ ರಾಜಕೀಯ
ಬರವಸೆಯಲ್ಲ ಬರವಸೆಯಾಗೆ
ಉಳಿವ ರಾಜಕೀಯ
ಕೈಕಟ್ಟಿ ಕುಳಿತು ಮರಳಿ ಬರುವುದೇ
ನಟನ ರಾಜಕೀಯ
ಇದುವೆ ಹೊಲಸು ರಾಜಕೀಯ
ಮುಗ್ದ ಬಡವರ ಕಶ್ಟ ಅರಿಯದ
ಕೆಟ್ಟ ರಾಜಕೀಯ
ಐದು ವರುಶದಲಿ ಒಮ್ಮೆ ಬರುವಂತ
ನೀಚ ರಾಜಕೀಯ
ಬಡವರ ಬಾಳಿಗೆ ಬೆಳಕು ಚೆಲ್ಲದ
ಕತ್ತಲ ರಾಜಕೀಯ
ಇದುವೆ ಹೊಲಸು ರಾಜಕೀಯ
ಬಂದುಗಳ ನಡುವೆ ಕ್ರೋದವ
ಬೆಳೆಸುವ ಸಮರ ರಾಜಕೀಯ
ಸ್ನೇಹಿತರೆಲ್ಲ ಶತ್ರುಗಳಾಗೋ
ಶತ್ರುತ್ವ ರಾಜಕೀಯ
ರಾಜಕಾರಣಿಯ ಗುಲಾಮರಾಗಿ
ಗುರುತಿಸುವ ರಾಜಕೀಯ
ಇದುವೆ ಹೊಲಸು ರಾಜಕೀಯ
ದುಡ್ಡಿನ ಮಹಿಮೆ ತಿಳಿಸುವ ಮಾರ‍್ಗವೇ
ದುಡ್ಡಿನ ರಾಜಕೀಯ
ದುಡ್ಡಿನಿಂದಲೇ ದುಡ್ಡಿಗಾಗಿಯೇ
ನಡೆವ ರಾಜಕೀಯ
ದುಡ್ಡಿಗೋಸ್ಕರ ಬೇಕಾದ್ದು ಮಾಡೋ
ದುಡ್ಡಿದ್ರೆ ರಾಜಕೀಯ
ಇದುವೆ ಹೊಲಸು ರಾಜಕೀಯ
(ಚಿತ್ರ ಸೆಲೆ: jaagruti.org)
ಇತ್ತೀಚಿನ ಅನಿಸಿಕೆಗಳು