ಕವಿತೆ: ಹಸಿರು ಜೀವದುಸಿರು

– .

ಕಾಡು, ಹಸಿರು, forest, green

ಜಗದ ಜೀವರಾಶಿಗಳ ಉಗಮಕ್ಕೆ
ಕಾರಣವಾಯಿತು ಜೀವಾಮ್ರುತ ನೀರು
ಜೀವಿಗಳ ಅಳಿವು ಉಳಿಯುವಿಕೆ
ಪ್ರಾಣವಾಯು ಆಯಿತು ಹಚ್ಚಹಸಿರು

ಮನುಶ್ಯರ ಆಸೆಯ ಪೂರೈಸುವ ಪ್ರಕ್ರುತಿ
ದಾನವರ ದುರಾಸೆಯಿಂದ ಆಗಿರುವುದು ವಿಕ್ರುತಿ
ಜಗದೇವನ ಸುಂದರ ಕಲ್ಪನೆಯು ಈ ಸ್ರುಶ್ಟಿಯ
ಹಾಳು ಮಾಡಿದರೆ ಕಳೆದುಕೊಳ್ಳುವರು ದ್ರುಶ್ಟಿಯ

ಬೂದೇವಿಯ ಹಸಿರುಡುಗೆಗಳೇ ಅರಣ್ಯಗಳು
ಬೂಮಿಜರಿಗೆ ಅರಣ್ಯಗಳೇ ಜೀವದುಸಿರುಗಳು
ಬೂದಾರ ಅವತಾರವೆತ್ತಿ ವಿಶ್ಣು ರಕ್ಶಿಸಿದ ಕ್ಶಿತಿಜ
ಬೂಮಾತೆಯ ಒಡಲ ವ್ರುಕ್ಶಗಳ ರಕ್ಶಿಸು ಮನುಜ

ಚಿಗುರುವ ಎಳೆಯ ಸಸಿಯನು ತುಳಿಯದಿರಿ
ಚಿಗುರೊಡೆದು ಮರವಾಗುವಂತೆ ಬೆಳೆಸಿರಿ
ಹಸಿರು ನಗು ಚೆಲ್ಲುವ ವ್ರುಕ್ಶಗಳ ಕಡಿಯದಿರಿ
ಹಸಿರೇ ಜೀವದುಸಿರು ಎಂಬುದ ಮರೆಯದಿರಿ

( ಚಿತ್ರ ಸೆಲೆ : goldtelegraph.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *