ಶಾವಿಗೆ ಉಪ್ಪಿಟ್ಟು

– ಕಿಶೋರ್ ಕುಮಾರ್.

ಬೇಕಾಗುವ ಸಾಮಾನುಗಳು

  • ಹುರಿದ ಚಿಕ್ಕ ಶಾವಿಗೆ – ¼ ಕೆಜಿ
  • ದೊಡ್ಡ ಮೆಣಸಿನಕಾಯಿ (ಕ್ಯಾಪ್ಸಿಕಮ್) – 1
  • ಈರುಳ್ಳಿ – 2
  • ಹಸಿಮೆಣಸಿನಕಾಯಿ – 5
  • ಕರಿಬೇವು – 10 ಎಲೆ
  • ಅರಿಶಿಣ ಪುಡಿ – ಸ್ವಲ್ಪ
  • ನಿಂಬೆಹಣ್ಣು – ½
  • ಸಾಸಿವೆ – ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಶ್ಟು
  • ಎಣ್ಣೆ – ಅಳತೆಗೆ ತಕ್ಕಶ್ಟು

ಮಾಡುವ ಬಗೆ

ಒಂದು ಬಾಣಲಿಯಲ್ಲಿ ನೀರು ಕುದಿಸಿ, ಒಲೆಯಿಂದ ಇಳಿಸಿ. ಕುದಿಸಿದ ನೀರಿಗೆ ಶಾವಿಗೆ ಹಾಕಿ, 5 ನಿಮಿಶ ನೆನೆಯಲು ಬಿಟ್ಟು, ನಂತರ ನೀರನ್ನು ಸೋಸಿ ತೆಗೆಯಿರಿ. ಈಗ ಒಂದು ಬಾಣಲಿಗೆ ಎಣ್ಣೆ ಹಾಕಿ, ಕಾದ ಎಣ್ಣೆಗೆ ಸಾಸಿವೆ ಮತ್ತು ಮೆಣಸಿನಕಾಯಿ ಹಾಕಿ ಹುರಿಯಿರಿ. ನಂತರ ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಮತ್ತು ದಪ್ಪ ಮೆಣಸಿನಕಾಯಿಯನ್ನು ಸೇರಿಸಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ. ಈಗ ಅರಿಶಿಣ ಪುಡಿ ಮತ್ತು ಸ್ವಲ್ಪ ಉಪ್ಪನ್ನು ಸೇರಿಸಿ ಚೆನ್ನಾಗಿ ಹುರಿಯಿರಿ. ಇದಕ್ಕೆ ಶಾವಿಗೆಯನ್ನು ಸೇರಿಸಿ, ರುಚಿಗೆ ತಕ್ಕಶ್ಟು ಉಪ್ಪು ಹಾಗೂ ನಿಂಬೆಹಣ್ಣಿನ ರಸ ಹಾಕಿ ಚೆನ್ನಾಗಿ ಕಲಸಿ. ಈಗ ಶಾವಿಗೆ ಉಪ್ಪಿಟ್ಟು ರೆಡಿ. ತೆಳ್ಳಗಿನ ಕಾಯಿ ಮತ್ತು ಹುರಿಗಡಲೆ ಚಟ್ನಿ ಜೊತೆ ಸವಿಯಲು ಚೆನ್ನಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks