ಸಿಹಿ ಕುರುಕಲು ಶಂಕರಪೋಳಿ

ಅನುಶ ಮಲ್ಲೇಶ್.

Shankarapoli, ಶಂಕರಪೋಳಿ

ಬೇಕಾಗುವ ಸಾಮಗ್ರಿಗಳು

  • ಮೈದಾ – 4 ಕಪ್
  • ಸಕ್ಕರೆ – 1 ಕಪ್
  • ಹಾಲು – 1/2 ಕಪ್
  • ಏಲಕ್ಕಿ ಪುಡಿ – 1 ಚಮಚ
  • ಉಪ್ಪು – ಚಿಟಿಕೆ
  • ಬೆಣ್ಣೆ – 1/2 ಕಪ್

ಮಾಡುವ ಬಗೆ

ಸಕ್ಕರೆ ಮತ್ತು ಹಾಲನ್ನು ಬೆರೆಸಿ ಒಲೆ ಮೇಲಿಟ್ಟು ಕರಗಿಸಿಕೊಳ್ಳಿ. ಪಾಕ ಬರುವ ಹಾಗೆ ಕಾಯಿಸಬೇಡಿ. ಕರಗಿಸಿದ ಮಿಶ್ರಣವನ್ನು ತಣ್ಣಗಾಗಲು ಬಿಡಿ. ಇನ್ನೊಂದು ಕಡೆ ಬೆಣ್ಣೆಯನ್ನು ಕರಗಿಸಿಕೊಳ್ಳಿ. ಒಂದು ಬಟ್ಟಲಿಗೆ ಮೈದಾ ಹಿಟ್ಟು, ಏಲಕ್ಕಿ ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿ, ನಂತರ ಬೆಣ್ಣೆಯನ್ನು ಸೇರಿಸಿ ಕಲಸಿಕೊಳ್ಳಿ. ಈ ಮಿಶ್ರಣಕ್ಕೆ ಕರಗಿಸಿದ ಹಾಲು ಮತ್ತು ಸಕ್ಕರೆ ನೀರನ್ನು ಸ್ವಲ್ಪ ಸ್ವಲ್ಪವಾಗಿ ಹಾಕಿಕೊಂಡು, ಪೂರಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ. ನಾದಿಕೊಂಡ ಹಿಟ್ಟನ್ನು 20 ನಿಮಿಶ ನೆನೆಯಲು ಬಿಡಿ. ನಂತರ ಹಿಟ್ಟನ್ನು ದಪ್ಪಗೆ ಲಟ್ಟಿಸಿ, ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ, ಎಣ್ಣೆಯಲ್ಲಿ ಹಾಕಿ ಕರಿಯಿರಿ. ರುಚಿ ರುಚಿಯಾದ ಶಂಕರಪೋಳಿ ತಿನ್ನಲು ರೆಡಿ.

(ಚಿತ್ರ ಸೆಲೆ: ಅನುಶ ಮಲ್ಲೇಶ್)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: