ಸುಟ್ಟ ಬದನೆಕಾಯಿ ಚಟ್ನಿ

– ಸುಹಾಸಿನಿ ಎಸ್.

ಬದನೆಕಾಯಿ ಚಟ್ನಿ ಉತ್ತರ ಕರ‍್ನಾಟಕದ ಒಂದು ವಿಶಿಶ್ಟವಾದ ಚಟ್ನಿ. ಇದನ್ನು ಬಾರತದ ಅನೇಕ ಕಡೆ ಬೇರೆ ಬೇರೆ ರೀತಿಯಲ್ಲಿ ಮಾಡುತ್ತಾರೆ. ಇದನ್ನು ಬೆಂಕಿಯಲ್ಲಿ ಸುಡುವುದರಿಂದ ಇದಕ್ಕೆ ಒಂದು ವಿಶಿಶ್ಟ ಸ್ವಾದ ಬರುವುದು. ಬದನೆಕಾಯಿ ಚಟ್ನಿ ತುಂಬಾ ಕಡಿಮೆ ಸಾಮಗ್ರಿಗಳಿಂದ ಸರಳವಾಗಿ ಮಾಡಬಹುದು.

ಏನೇನು ಬೇಕು

ಬದನೆಕಾಯಿ – 2-3
ಬೆಳ್ಳುಳ್ಳಿ – 3-4 ಎಸಳು
ಜೀರಿಗೆ – 1 ಚಮಚ
ಒಣ ಮೆಣಸಿನಕಾಯಿ/ಕೆಂಪು ಕಾರ – ಸ್ವಲ್ಪ
ಅರಿಶಿಣ – ಸ್ವಲ್ಪ
ಬೆಲ್ಲ – ಸ್ವಲ್ಪ
ಉಪ್ಪು – ಸ್ವಲ್ಪ
ಬೇಕೆನಿಸಿದರೆ ಕರಿಬೇವು ಮತ್ತು ಕೊತ್ತಂಬರಿ ಹಾಕಬಹುದು.

ಮಾಡುವ ಬಗೆ

ಬದನೆಕಾಯಿಯನ್ನು ಗ್ಯಾಸ್ ಬೆಂಕಿ ಅತವಾ ಕೆಂಡದ ಮೇಲೆ ಇಟ್ಟು ಒಂದೊಂದಾಗಿ ಪೂರ‍್ತಿ ಬದನೆಕಾಯಿ ಸುಡಬೇಕು. ಬದನೆಕಾಯಿ ಸ್ವಲ್ಪ ಆರಿದಮೇಲೆ ಕಪ್ಪಗಿನ ಸಿಪ್ಪೆ ಸುಲಿದು ಕುಟಾಣಿಯಲ್ಲಿ/ಒಳಕಲ್ಲಲ್ಲಿ ಹಾಕಿ. ಮೇಲೆ ತಿಳಿಸಿದ, ಉಳಿದ ಎಲ್ಲ ಸಾಮಗ್ರಿಗಳನ್ನೂ ಕುಟಾಣಿಯಲ್ಲಿ/ಒಳಕಲ್ಲಲ್ಲಿ ಹಾಕಿ ಕುಟ್ಟಿ. ಈಗ ಸುಟ್ಟ ಬದನೆಕಾಯಿ ಚಟ್ನಿ ತಯಾರು. ಅನ್ನ, ರೊಟ್ಟಿ ಅತವಾ ಚಪಾತಿಯೊಂದಿಗೆ ಸವಿಯಲು ಈ ಚಟ್ನಿ ಚೆನ್ನಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: