ಮೊಸರು ಪುರಿ ಮಾಡುವ ಬಗೆ

ಕಲ್ಪನಾ ಹೆಗಡೆ.

IMG_1697

ಬೇಕಾಗುವ ಸಾಮಗ್ರಿಗಳು:
10 ಪುರಿ, 2 ಲೋಟ ಮೊಸರು, 1 ಲೋಟ ಸಕ್ಕರೆ ಪುಡಿ, ಹುಣಸೆ ಹಣ್ಣಿನ ರಸ, ಕೊತ್ತಂಬರಿ ಸೊಪ್ಪು, 100 ಗ್ರಾಂ ಬೆಂದ ಹಸಿ ಬಟಾಣಿ, 5 ಆಲೂಗಡ್ಡೆ, ಸಿಹಿ-ಹುಳಿ ಚಟ್ನಿ ಇಲ್ಲವೇ ಅಂಗಡಿಯಲ್ಲಿ ಸಿಗುವ ಪಾನಿ ಪುರಿ ಮಸಾಲೆ ಪುಡಿ, 100 ಗ್ರಾಂ ಓಂ ಪುಡಿ, ಹಸಿಮೆಣಸಿನಕಾಯಿ, ಪುದಿನಾಸೊಪ್ಪು.

ಮಾಡುವ ವಿದಾನ:
1. ಉಪ್ಪು, ಮೆಣಸಿನ ಪುಡಿ, ಆಲೂಗಡ್ಡೆ ಹಾಕಿ ಕಿವುಚಿದ ಆಲೂಗಡ್ಡೆಯ ಮಸಾಲೆ ಮಾಡಿಕೊಳ್ಳಿ.
2. ಹಸಿಮೆಣಸಿನಕಾಯಿ ಹಾಗೂ ಕೊತ್ತಂಬರಿ ಸೊಪ್ಪು, ಪುದಿನಾಸೊಪ್ಪು ಹಾಕಿ ರುಬ್ಬಿದ ಹಸಿರು ಚಟ್ನಿ ಮತ್ತು ಹುಣಸೆಹಣ್ಣಿನ ರಸ, ಸಕ್ಕರೆ, ಚಿಟಿಕೆ ಕಾಳುಮೆಣಸಿನ ಪುಡಿ ಹಾಕಿದ ಸಿಹಿ-ಹುಳಿ ಚಟ್ನಿ (ಇಲ್ಲವೇ ಅಂಗಡಿಯಲ್ಲಿ ಸಿಗುವ ಪಾನಿಪುರಿ ಮಸಾಲೆ ಪುಡಿ) ಮಾಡಿಕೊಳ್ಳಿ.
3. ಮೊಸರಿಗೆ ಸಕ್ಕರೆ ಪುಡಿಯನ್ನು ಹಾಕಿ ಕಲಸಿಟ್ಟುಕೊಳ್ಳಿ.

ತಟ್ಟೆಗಳಲ್ಲಿ ಕರಿದ ಪುರಿಯನ್ನು ಸಮವಾಗಿಡಿ. ಪುರಿ ಮೇಲೆ ರಂದ್ರ ಮಾಡಿ ಅದರ ಮೇಲೆ ಆಲೂಗೆಡ್ಡೆಯ ಮಸಾಲೆ, ಬೆಂದ ಹಸಿ ಬಟಾಣಿ, ಹಸಿರು ಚಟ್ನಿ, ಸಿಹಿ-ಹುಳಿ ಚಟ್ನಿ ಹಾಕಿ. ಪುರಿ ಮೇಲಗಡೆ ಸಕ್ಕರೆ ಪುಡಿ ಸೇರಿಸಿದ ಮೊಸರು, ಹೆಚ್ಚಿದ ಕೊತ್ತಂಬರಿ ಸೊಪ್ಪು, ಓಂ ಪುಡಿ ಉದುರಿಸಿ ತಿನ್ನಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: