ಹನಿಗವನಗಳು

ವೆಂಕಟೇಶ ಚಾಗಿ.

ganesha

*** ಮಣ್ಣು ***

ಮಣ್ಣಿನಿಂದಲೂ
ದೇವರು ಹುಟ್ಟಬಲ್ಲ
ಎಂದು ತೋರಿಸಿದ ಗಣಪ,
ಮಾನವನಿಗೆ ಬೊಪ್ಪನಿಂದ
ಒಂದೇ ಒಂದು ಹಾರೈಕೆ
ಮಣ್ಣು ಮಲಿನ ಮಾಡಬೇಡ್ರಪ

*** ತಪ್ಪೇನಿಲ್ಲ ***

ಮನೆಮನೆಗಳಲ್ಲೂ
ಹಾದಿ ಬೀದಿಗಳಲ್ಲೂ
ಗಣಪ ಬರಲಿ
ಗಣಪನೊಂದಿಗೆ
ಬಕ್ತರ ಮನದಲ್ಲಿ
ಬಕ್ತಿಯೂ ಮೂಡಿಬರಲಿ

*** ಚಿತ್ರ ***

ಗಣಪನ ಚಿತ್ರಕ್ಕಿಂತ
ತುಂಬಾ ದೊಡ್ಡದಾಗಿದೆ
ವಿಶ್ ಮಾಡುವವರ ಬಾವಚಿತ್ರ
ನೋಡಿ ನಗುವನು ಗಣೇಶ
ಮನದಲ್ಲಿ ಅಂದುಕೊಳ್ಳುತ್ತಾ
ಈ ಲೋಕ ತುಂಬಾ ವಿಚಿತ್ರ

*** ದಿಗಿಲು ***

ಹಾದಿ ಬೀದಿಗಳಲ್ಲಿ
ಗಣಪನ ಪ್ಲೆಕ್ಸ್ ಗಳನ್ನು ಕಂಡು
ಎಲ್ಲರಿಗೂ ದಿಗಿಲು
ಚಿತ್ರದಲ್ಲಿ ಇರುವವರಿಗೆಲ್ಲಾ
ಇದೆ ದೊಡ್ಡದಾದ ಹೊಟ್ಟೆ
ಗಣಪನಿಗಶ್ಟೇ ಯಾಕೆ ಸೊಂಡಿಲು

( ಚಿತ್ರಸೆಲೆ : pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: