ಜೋಳದ ಮುದ್ದೆ
ಏನೇನು ಬೇಕು?
ಜೋಳದ ಹಿಟ್ಟು – 2 ಬಟ್ಟಲು
ಜೀರಿಗೆ – 1 ಚಮಚ
ಎಣ್ಣೆ – 1 ಚಮಚ
ಕರಿಬೇವು – 5-6 ಎಲೆ
ಬೆಳ್ಳುಳ್ಳಿ – 4-5 ಎಸಳು
ಉಪ್ಪು – ರುಚಿಗೆ ತಕ್ಕಶ್ಟು
ನೀರು – 3-4 ಬಟ್ಟಲು
ಮಾಡುವುದು ಹೇಗೆ?
ಮೊದಲಿಗೆ ಬೆಳ್ಳುಳ್ಳಿ ಎಸಳು ಬಿಡಿಸಿಕೊಂಡು ಜಜ್ಜಿಕೊಳ್ಳಿ. ಜೋಳದ ಹಿಟ್ಟನ್ನು ಹುರಿದು ಇಟ್ಟುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಜೀರಿಗೆ, ಕರಿಬೇವು, ಬೆಳ್ಳುಳ್ಳಿ, ಸೇರಿಸಿ ಚೆನ್ನಾಗಿ ಬಾಡಿಸಿ. ಬೇಕಿದ್ದರೆ ಒಗ್ಗರಣೆಗೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಗೂ ಒಂದು ಹಸಿ ಮೆಣಸಿನ ಕಾಯಿ ಸೇರಿಸಬಹುದು. ಒಗ್ಗರಣೆ ಬಾಡಿದ ಮೇಲೆ ಇದಕ್ಕೆ 2 ಲೋಟ ನೀರು, ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ, ನೀರು ಬಿಸಿಯಾಗಲು ಬಿಡಿ.
ನೀರು ಎಸರು ಬಂದ ಮೇಲೆ, ಬಿಸಿ ಜೋಳದ ಹಿಟ್ಟನ್ನು ಹಾಕಿ ಗಂಟಾಗದಂತೆ ಚೆನ್ನಾಗಿ ತಿರುಗಿಸಿ. ಜೋಳದ ಹಿಟ್ಟು ಬಿಸಿಯಾಗಿದ್ದರೆ ಗಂಟುಗಳು ಬರುವುದಿಲ್ಲ. ಇದನ್ನು ಕೆಲ ನಿಮಿಶಗಳವರೆಗೆ ಸಣ್ಣ ಉರಿಯಲ್ಲಿ ಇಟ್ಟು ಆಗಾಗ ತಿರುಗಿಸುತ್ತಿರಿ. 4-5 ನಿಮಿಶಗಳಲ್ಲಿ ಜೋಳದ ಮುದ್ದೆ ತಯಾರು. ಬಿಸಿ ಬಿಸಿಯಾದ ಜೋಳದ ಮುದ್ದಗೆ ಮೇಲೆ ಒಂದು ಚಮಚ ತುಪ್ಪ ಸೇರಿಸಿ ಸವಿಯಬಹುದು.
ಕೆಲವೇ ನಿಮಿಶಗಳಲ್ಲಿ ತಯಾರಿಸಬಹುದಾದ ಜೋಳದ ಮುದ್ದೆ ವಯಸ್ಸಾದವರಿಗೆ ಮತ್ತು ಮಕ್ಕಳಿಗೆ ತುಂಬಾ ಹಿಡಿಸುತ್ತದೆ. ಮಯ್ಯೊಳಿತು ಚೆನ್ನಾಗಿಲ್ಲದೆ ಇದ್ದಾಗ ಕೂಡ ಜೋಳದ ಮುದ್ದೆಯನ್ನು ತಿನ್ನಲು ನೀಡಬಹುದಾಗಿದೆ.
ಇತ್ತೀಚಿನ ಅನಿಸಿಕೆಗಳು