ಬೆರಗುಗೊಳಿಸುವ ಒಂದಶ್ಟು ಸಂಗತಿಗಳು!

– ನಿತಿನ್ ಗೌಡ.

ನಮ್ಮ ಸುತ್ತ ಹಲವಾರು ಸಂಗತಿಗಳು ನಡೆಯುತ್ತಿರುತ್ತವೆ. ಅವುಗಳ ಕಡೆ ಒಮ್ಮೆ ಗಮನ ಹರಿಸಿದಲ್ಲಿ ಸೋಜಿಗದ ಗೂಡೇ ನಮ್ಮೆದುರು ಮೈದಳೆದು ನಿಲ್ಲುತ್ತದೆ. ಅಂತಹುದೇ ಕೆಲವು ಅಚ್ಚರಿಯ ಸಂಗತಿಗಳನ್ನು ನೋಡೋಣ.

  • ಬೂಮಿಯ ಮೇಲಿನ ಅತ್ಯಂತ ಆಳವಾದ ಸ್ತಳ ಗೊತ್ತೇ? ಅದುವೆ ಪೆಸಿಪಿಕ್ ಕಡಲಿನಲ್ಲಿರುವ ‘ಮರಿಯಾನ ಕಂದಕ’. ಇದು ಅಂದಾಜು 11 ಕಿ.ಮೀ ನಶ್ಟು ಆಳವಿದೆ. ಅಂದರೆ ನಮ್ಮ ಹಿಮಾಲಯದಲ್ಲಿರುವ ಮೌಂಟ್ ಎವರೆಶ್ಟ್ ಬೆಟ್ಟವನ್ನು ತೆಗೆದುಕೊಂಡಲ್ಲಿ( ಅಂದಾಜು 9 ಕೀ.ಮೀ ಎತ್ತರ); ಅದನ್ನು ಈ ಕಂದಕದೊಳಗೆ ಮುಳುಗಿಸಬಹುದು ಅಲ್ಲದೇ ಈ ಮುಳಗಿದ ಬೆಟ್ಟದ ತಲೆಯಮೇಲೆ ಇನ್ನೂ ಎರಡು ಕಿ.ಮೀ ಅಶ್ಟು ಆಳವಿರುತ್ತದ.
  • ನೈಲ್ ನದಿಯು, ಬುವಿಯ ಮೇಲಿನ ಅತ್ಯಂತ ಉದ್ದವಾದ ನದಿಯಾಗಿದೆ. ಇದು ಅಂದಾಜು ಏಳು ಸಾವಿರ ಕಿ.ಮೀ ನಶ್ಟು ಉದ್ದವಿದೆ. ಅಂದರೆ ನಮ್ಮ ಕಾವೇರಿ ನದಿಯ ಎಂಟೂವರೆ ಪಟ್ಟು!
  • ನಮ್ಮ ಮನೆಯೊಳಗೆ ದೊರೆಯುವ ದೂಳಿನಲ್ಲಿ ಹೆಚ್ಚಿನ ಬಾಗ ನಮ್ಮಲ್ಲಿನ ಸತ್ತ ಚರ್‍ಮದ ಜೀವಕೋಶಗಳಾಗಿರುತ್ತವೆ. ಒಬ್ಬ ಮನುಶ್ಯನಿಂದ ಗಂಟೆಗೆ ಸರಾಸರಿ ಎರಡು ಕೋಟಿ ಚರ್‍ಮದ ಜೀವಕೋಶಗಳು ಹೊರಹಾಕಲ್ಪಡುತ್ತವೆ.
  • ಮನುಶ್ಯನ ರಕ್ತ ಹರಿಯುವಿಕೆಯ ವ್ಯವಸ್ತೆಯು ಸರಿಸುಮಾರು 96000 ಕಿ.ಮೀ ನಶ್ಟು ಉದ್ದವಿರುತ್ತದೆ. ಅಂದರೆ ಇದು ಅಂದಾಜು ಬೂಮಿಯ ಸುತ್ತಳತೆಯ ಎರಡೂವರೆ ಪಟ್ಟಿನಶ್ಟಾಗುತ್ತದೆ.
  • ಬೂಮಿಯ ಮೇಲ್ಮೈ ಮೇಲೆ, ಒಂದೂವರೆ ಅಡಿಯಶ್ಟು ಚಿನ್ನದ ಲೇಪನ ಮಾಡುವಶ್ಟು ಬಂಗಾರ ಬೂಮಿಯೊಳಗೇ ಇದೆ!
  • ಆಕ್ಟೋಪಸ್ ಒಂದು ಬಾರಿಗೆ (ಒಂದು ತಿಂಗಳೊಳಗೆ), ಐವತ್ತಾರು ಸಾವಿರ ಮೊಟ್ಟೆಗಳನ್ನು ಇಡುತ್ತದೆ.
  • ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂಬ ಚರ್‍ಚೆಯಂತೆ, ಗಿಡಗಳು ಮೊದಲೋ ಇಲ್ಲವೇ ಬೀಜಗಳು ಮೊದಲೋ ಎಂಬ ಚರ್‍ಚೆಯೂ ಅಶ್ಟೇ ಕುತೂಹಲಕಾರಿಯಾಗಿದೆ ಮತ್ತು ಇದಕ್ಕೆ ಉತ್ತರವೂ ದೊರೆತಿದೆ! ಅದು ಗಿಡವೇ ಮೊದಲು ಎನ್ನುತಿದೆ. ಪಳೆಯುಳಿಕೆಗಳ ಆದಾರದ ಮೇಲೆ ಒಂದು ಕೋಶದ ಬೀಜಕಗಳಿಂದ(spores) ಗಿಡಗಳು ಸಂತಾನೋತ್ಪತ್ತಿ ಹೊಂದಿ ಹುಟ್ಟುತ್ತಿದ್ದವು. ಬೀಜಗಳು ಹಲವು ಕೋಶಗಳನ್ನು ಹೊಂದಿದ್ದು, ಅವುಗಳು ಪೀಳಿಗೆ ಮಾರ್‍ಪು ಹೊಂದಲು ಇನ್ನೂ ಒಂದೂವರೆ ಕೋಟಿ ವರುಶ ಬೇಕಾಯಿತು.
  • ನಮ್ಮಳೊಗಿರುವ ಪೀಳಿಗಳು(Genes) ನಮ್ಮಲ್ಲಿನ ಸ್ವಬಾವ, ಅಂದ, ನಡೆಯುವ ಬಂಗಿ ಹೀಗೆ ಹಲವು ವಿಚಾರಗಳನ್ನು ನಿರ್‍ದಾರ ಮಾಡುತ್ತವೆ. ಇದರಲ್ಲಿನ ಡಿ.ಎನ್.ಎ A (ಅಡಿನೈನ್) T (ತೈಮಿನ್) C (ಸೈಟೋಸಿನ್) G (ಗ್ವಾನೈನ್) ಎಂಬ ನಾಲ್ಕು ರಾಸಾಯನಿಕಗಳಿಂದ ಆಗಿರುತ್ತದೆ. ಈ A,T,C,G ಗಳಿಗೆ ,ಸಂಗೀತದ ಟಿಪ್ಪಣಿಗಳನ್ನು (Musical notes) ಸೇರಿಸಿದಲ್ಲಿ, ನಮ್ಮಲ್ಲಿನ ಡಿ.ಎನ್.ಎ ಅದ್ಬುತ ಸಂಗೀತದ ನಾದವನ್ನು ತೋರುತ್ತದೆ. ಎತ್ತುಗೆಗೆ ‘A’ ಗೆ ಸಂಗೀತ ಸ್ವರದ ‘ಸ’, ‘T’ ಗೆ ಸಂಗೀತ ಸ್ವರದ ‘ರಿ’ ಈ ಬಗೆಯಾಗಿ ಅಂದುಕೊಂಡಲ್ಲಿ; ನಮ್ಮ ಡಿ.ಎನ್.ಎ ಸರಪಳಿಗಳು ಎತ್ತುಗೆಗೆ AATCGGTC.. ‘ಸಸರಿಮಗಗಮ’ ಈ ಬಗೆಯ ನಾದ ಹೊಮ್ಮಿಸಬಹುದು.
  • ನ್ಯೂಟ್ರಾನ್ ಅರಿಲ್ ( Neutron star) ನ ಒಂದು ಚಮಚ ತೆಗೆದುಕೊಂಡಲ್ಲಿ ಅದು ನಮ್ಮ ಬುವಿಯ ಮೇಲಿರುವ ಒಟ್ಟೂ ಮನುಶ್ಯರ ತೂಕಕ್ಕಿಂತ ಹೆಚ್ಚಿರುತ್ತದೆ. ಇದಕ್ಕೆ ಕಾರಣ ಅದರಲ್ಲಿನ ದಟ್ಟತೆ( Density ).

( ಚಿತ್ರಸೆಲೆ: Microsoft Copylot )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks