ಮಾಡಿ ನೋಡಿ ತರಕಾರಿ ಉಪ್ಪಿಟ್ಟು
– ನಿತಿನ್ ಗೌಡ.
ಏನೇನು ಬೇಕು ?
- ಗೋದಿ ರವೆ – 2 ಚಿಕ್ಕ ಲೋಟ
- ಕ್ಯಾರೇಟ್ – 2
- ಬೀನ್ಸ್ – 4
- ಈರುಳ್ಳಿ – 1.5
- ಟೋಮೋಟೋ – 1
- ಹಸಿಮೆಣಸು – 5 ರಿಂದ 6
- ಕರಿಬೇವು ಸ್ವಲ್ಪ
- ಸಾಸಿವೆ ಸ್ವಲ್ಪ
- ಶೇಂಗಾ ಸ್ವಲ್ಪ
- ಉಪ್ಪು
- ಎಣ್ಣೆ ಸ್ವಲ್ಪ
- ಅರಿಶಿಣ ಸ್ವಲ್ಪ
ಮಾಡುವ ಬಗೆ:
ಮೊದಲಿಗೆ ಹೆಂಚಿನ ಮೇಲೆ ಚೂರು ಎಣ್ಣೆ ಹಾಕಿ, ಗೋದಿರವೆಯನ್ನು ಹಾಕಿ ಹುರಿದು ತೆಗೆದಿಡಿ. ಈಗ ಒಂದು ಪಾತ್ರೆಗೆ 4 ರಿಂದ 5 ಲೋಟ ನೀರು ಹಾಕಿ ಕುದಿಯಲು ಇಡಿ. 2 ಕಪ್ಪು ರವೆಗೆ 4 ಲೋಟ ನೀರು ಹಾಕಬೇಕಾಗುತ್ತದೆ. ಈಗ ಇನ್ನೊಂದು ಕಡೆ ಒಂದು ಪಾತ್ರೆಗೆ ಎಣ್ಣೆ, ಸಾಸಿವೆ, ಬೇವಿನ ಎಲೆ ಹಾಕಿ ಒಗ್ಗರಣೆ ಹಾಕಿಕೊಳ್ಳಿ. ಇದಕ್ಕೆ ಶೇಂಗಾಬೀಜ ಹಾಕಿ, ಅದು ಕೆಂಪಾಗುವ ವರೆಗೆ ಹುರಿಯಿರಿ. ಈಗ ಇದಕ್ಕೆ ಹಸಿಮೆಣಸು, ಈರುಳ್ಳಿ ಹಾಕಿ, ಅದನ್ನು ಕಂದಾಗಿಸಿ. ಈಗ ಇದಕ್ಕೆ ಹೆಚ್ಚಿಟ್ಟುಕೊಂಡ ಟೋಮೋಟೋ, ಕ್ಯಾರೇಟು, ಬೀನ್ಸು ಹಾಕಿ. ಆಮೇಲೆ ಇದಕ್ಕೆ ಕೊಂಚ ಅರಿಶಿಣ, ರುಚಿಗೆ ತಕ್ಕಶ್ಟು ಉಪ್ಪನ್ನು ಹಾಕಿ ಹುರಿಯಿರಿ. ಈಗ ಇದಕ್ಕೆ ಕಾಯಿಸಿಕೊಂಡ ಬಿಸಿ ನೀರನ್ನು ಹಾಕಿ. ನಂತರ ಹುರಿದುಕೊಂಡ ಗೋದಿರವೆಯನ್ನು ಹಾಕಿ, ನೀರು ಆರುವ ವರೆಗೆ ಬೇಯಿಸಿ. ಉಪ್ಪಿಟ್ಟು ಕುದಿ ಹಾರುತ್ತಿರುವ ಹೊತ್ತಿಗೆ ಒಲೆಯನ್ನು ನಂದಿಸಿ. ಈಗ ಬಿಸಿ ಬಿಸಿ ತರಕಾರಿ ಉಪ್ಪಿಟ್ಟು ತಯಾರಾಗಿದ್ದು, ಬೆಳಿಗ್ಗೆ ತಿಂಡಿಯಾಗಿ ಸವಿಯಬಹುದು.
(ಚಿತ್ರಸೆಲೆ: ಬರಹಗಾರರು)
ಇತ್ತೀಚಿನ ಅನಿಸಿಕೆಗಳು