ಕವಿತೆ: ಹೊಸ ವರುಶ
ಹೊಸ ಹಾದಿಯಲ್ಲಿ ನಡೆಯಬೇಕಿದೆ
ಹಳೇ ದಾರಿಯೆಲ್ಲ ಮುಚ್ಚಿ ಹೋದ ಮೇಲೆ
ಹೊಸ ಚಿಗುರು ಚಿಗುರಬೇಕಿದೆ
ಹಣ್ಣೆಲೆಯೆಲ್ಲಾ ಉದುರಿದ ಮೇಲೆ
ಹೊಸ ತೆರೆಯ ಸೊಬಗ ನೋಡಬಯಸಿದೆ
ಅಪ್ಪಳಿಸಿದ ಅಲೆಗಳೆಲ್ಲಾ ಹಿಂದೆ ಸರಿದ ಮೇಲೆ
ಸವಾಲುಗಳ ಎದುರಿಸಬೇಕಿದೆ
ಕಡುಬವಣೆ ಆವರಿಸಿದ ಮೇಲೆ
ಗೆಲುವಿನತ್ತ ಹೆಜ್ಜೆ ಹಾಕಬೇಕಿದೆ
ಸೋಲುಗಳ ಅನುಬವಿಸಿದ ಮೇಲೆ
ನಿನ್ನೆಯ ಕಹಿ ಕಶ್ಟಗಳ ಮರೆಯಬೇಕಿದೆ
ಇಂದಿನ ಸಿಹಿ ಕ್ಶಣಗಳ ಸವಿದ ಮೇಲೆ
ಹೊಸತನವ ಹಂಬಲಿಸಬೇಕಿದೆ
ಹಳೆತನವು ಬೇಸತ್ತ ಮೇಲೆ
ಹೊಸ ಮುನ್ನುಡಿಯೊಂದ ಬರೆಯಬೇಕಿದೆ
ಹಳೆಯ ಪುಟಗಳ ತಿರುವಿದ ಮೇಲೆ
ಹೊಸ ವರುಶವ ಸ್ವಾಗತಿಸಬೇಕಿದೆ
ಹಳೇ ವರುಶವು ಉರುಳಿದ ಮೇಲೆ.
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು