ಕಿರುಗವಿತೆಗಳು

– ನಿತಿನ್ ಗೌಡ.

ಮಡಿಲು

ಮಡಿಲ ಹುಡುಕುತಿದೆ, ಮನಸು;
ತಡವಾದರೂ ತರವಾಗಿ ದೊರೆತಂತಿದೆ,
ನಿನ್ನೊಲವೆಂಬ ನೆಮ್ಮದಿಯ ಸೂರು;
ಹಸನಾಗುವುದು ಇನ್ನು ನಮ್ಮ ಬಾಳು,
ಇದ ತಡೆಯುವರು ಇನ್ನಾರು

******
ಸುಳ್ಳಲ್ಲವೇ

ಹೇಳಲು ಹೆಚ್ಚಿರುವಾಗ, ತುಟಿ ಬಿಚ್ಚದಿರುವುದೇ
ಬಗೆಯುವ ತಪ್ಪಲ್ಲವೇ?
ಮೌನಕೆ ಬಿಡುವಾದಾಗ, ಮಾತನಾಡದಿರುವುದೇ
ಬಗೆಯುವ ಸುಳ್ಳಲ್ಲವೇ?

******

ಗಾಜಿನ‌‌ ಸೂರು

ಕೂಡಿಟ್ಟ ಕನಸುಗಳ ಗಾಜಿನ ಸೂರ
ನುಚ್ಚು ನೂರು ಮಾಡಿದೆ ನೀ ಇನಿಯ,
ನಾ ಹೇಗೆ ಬೀರಲಿ ಮಂದಹಾಸ
ಕೊಂಚವೂ ಅಳುಕಿಲ್ಲದೆ ಮನದಲಿ

******

ಮೌನದ ಮಾತು

ಯಾರಿಗೂ ಹೇಳಲಾಗದಂತಿದೆ
ಎದೆಯೊಳಗಿನ‌ ಕೂಗು..
ಕೇಳಿಸಿಕೊಳ್ಳುವ ಕಿವಿ ಬೇಕಿದೆ..
ಆದರೆ ಇದು ಮೌನದ ಮಾತು..

 

(ಚಿತ್ರಸೆಲೆ: copilot.mocrosoft.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *