ಹನಿಗವನಗಳು
– ವೆಂಕಟೇಶ ಚಾಗಿ.
***ನ್ಯಾಯ***
ಸಮಾಜದ ಎಲ್ಲರಿಗೂ
ಸಿಗಲೇಬೇಕು
ಸಮಾನತಾ ನ್ಯಾಯ
ಆದರೂ ಅಸಪಲ
ಆಗಾಗ ಕೇಳುತಿದೆ
ಆಗುತಿದೆ ಅನ್ಯಾಯ
***ಒಳಿತು***
ಎಲ್ಲರ ಆಶಯ
ಸದಾ ಆಗುತಿರಲಿ
ಜಗಕೆ ಒಳಿತು
ಮಾತಲ್ಲೇ ಮನೆಯೇಕೆ
ನಡೆಯಬೇಕು ಎಲ್ಲ
ಅರಿತು ಬೆರೆತು
***ನೆನಪು***
ಜೀವನದ ಹಾದಿಯಲಿ
ಪ್ರತಿ ಹೆಜ್ಜೆಗಳು
ನಾಳೆಗಳ ನೆನಪು
ಸಿಹಿಯಾಗಿರಲಿ
ಹೆಮ್ಮೆ ತರುವಂತಿರಲಿ
ಬರುವ ಮುಂಚೆ ಮುಪ್ಪು
***ಗೋಡೆ***
ಏಕೆ ಕಟ್ಟಬೇಕು
ಸಂಬಂದಗಳ ನಡುವೆ
ಅನವಶ್ಯಕ ಗೋಡೆ
ದೂರದ ಉಳಿವಿಗೆ
ಬಿಟ್ಟು ಬಿಡಬೇಕು
ಅನವಶ್ಯಕ ಗೊಡವೆ
***ಸೂರ‍್ಯ***
ಬೆಳಿಗ್ಗೆ ಮೊದಲೆದ್ದು
ಕಾಯಕದಲ್ಲಿ ತೊಡಗುವ
ಕಾಯಕಯೋಗಿ ಸೂರ‍್ಯ
ಮಾದರಿ ನಮಗೆಲ್ಲ
ಬದುಕು ಇರುವರೆಗೂ
ಮರೆಯಬಾರದು ಕಾರ‍್ಯ
(ಚಿತ್ರ ಸೆಲೆ: ecosalon.com)
ಇತ್ತೀಚಿನ ಅನಿಸಿಕೆಗಳು