ಮಾಡಿ ನೋಡಿ ಆಲೂ ಗೋಬಿ ವಡೆ
– ಸವಿತಾ.
ಏನೇನು ಬೇಕು ?
- ಆಲೂಗಡ್ಡೆ – 2
- ಹೂಕೋಸು (ಗೋಬಿ ) – ಕಾಲು ಬಾಗ
- ಹಸಿ ಮೆಣಸಿನ ಕಾಯಿ – 4
- ಬೆಳ್ಳುಳ್ಳಿ ಎಸಳು – 6
- ಹಸಿ ಶುಂಠಿ – ಕಾಲು ಇಂಚು
- ಜೀರಿಗೆ – ಕಾಲು ಚಮಚ
- ಉಪ್ಪು ರುಚಿಗೆ ತಕ್ಕಶ್ಟು
- ಅರಿಶಿಣ ಸ್ವಲ್ಪ
- ಕಡಲೆ ಹಿಟ್ಟು – 1 ಬಟ್ಟಲು [100ಗ್ರಾಮ್ ]
- ಅಡುಗೆ ಸೋಡಾ ಸ್ವಲ್ಪ
- ಕೊತ್ತಂಬರಿ ಸೊಪ್ಪು – ಕಾಲು ಕಟ್ಟು
- ಕರಿಯಲು ಎಣ್ಣೆ
ಮಾಡುವ ಬಗೆ
ಮೊದಲಿಗೆ ಹೂಕೋಸಿನ ಎಲೆಗಳನ್ನು ಕತ್ತರಿಸಿ ತೆಗೆದು, ಚೆನ್ನಾಗಿ ತೊಳೆಯಿರಿ.ಆಮೇಲೆ ಆಲೂಗಡ್ಡೆಗಳನ್ನು ತೊಳೆಯಿರಿ. ಈಗ ಹೂಕೋಸು ಆಲೂಗಡ್ಡೆಗಳನ್ನು ಕುಕ್ಕರ್ ಗೆ ಹಾಕಿ, ಎರಡು ಕೂಗು ಕುದಿಸಿ ಆರಲು ಬಿಡಿರಿ. ಆಮೇಲೆ ಹಸಿ ಮೆಣಸಿನ ಕಾಯಿ, ಹಸಿ ಶುಂಟಿ, ಜೀರಿಗೆ, ಬೆಳ್ಳುಳ್ಳಿ ಎಸಳು ಮತ್ತು ಕೊತ್ತಂಬರಿ ಸೊಪ್ಪನ್ನು ಸ್ವಲ್ಪ ಅರೆದು ಒಂದು ತಟ್ಟೆಗೆ ಹಾಕಿರಿ. ಕುದಿಸಿದ ಆಲೂಗಡ್ಡೆ ಸಿಪ್ಪೆ ತೆಗೆದು ತಟ್ಟೆಗೆ ಸೇರಿಸಿ. ಆಮೇಲೆ ಹೂಕೋಸು ಮತ್ತು ಆಲೂಗಡ್ಡೆ ಒಡೆದು ಪುಡಿ ಮಾಡಿ, ಹಸಿ ಮೆಣಸಿನ ಕಾಯಿ, ಜೀರಿಗೆ ಮಿಶ್ರಣ, ಸ್ವಲ್ಪ ಉಪ್ಪು, ಅರಿಶಿಣ ಸೇರಿಸಿ ಚೆನ್ನಾಗಿ ಕಲಸಿ. ನಂತರ ನಿಂಬೆ ಹಣ್ಣಿನ ಗಾತ್ರದಲ್ಲಿ ಉಂಡೆ ಮಾಡಿ ತಟ್ಟಿ ಇಟ್ಟುಕೊಳ್ಳಿರಿ .
ಕಡಲೆ ಹಿಟ್ಟು, ಸ್ವಲ್ಪ ನೀರು, ಸ್ವಲ್ಪ ಉಪ್ಪು, ಅರಿಶಿಣ ಮತ್ತು ಸ್ವಲ್ಪ ಅಡುಗೆ ಸೋಡಾ ಹಾಕಿ ಬೊಂಡಾ ಹದಕ್ಕೆ ಕಲಸಿಟ್ಟುಕೊಳ್ಳಿರಿ. ತಟ್ಟಿದ ಹೂಕೋಸು ಆಲೂಗಡ್ಡೆ ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಈಗ ಬಿಸಿ ಬಿಸಿ ಬಟಾಟಿ ಹೂಕೋಸು ವಡೆ ( ಆಲೂ ಗೋಬಿ ವಡೆ ) ತಯಾರಿದ್ದು, ಇದನ್ನು ಕೊತ್ತಂಬರಿ ಚಟ್ನಿ ಅತವಾ ಕೊಬ್ಬರಿ ಚಟ್ನಿ ಜೊತೆ ಸವಿಯಕಲು ಚೆನ್ನಾಗಿರುತ್ತದೆ.
( ಚಿತ್ರಸೆಲೆ: ಬರಹಗಾರರು )
ಇತ್ತೀಚಿನ ಅನಿಸಿಕೆಗಳು