ಕಿರುಗವಿತೆಗಳು

– ನಿತಿನ್ ಗೌಡ.

ಕಡಲ ನೀರ ಸೋಕಿಸಿ

ಬರಡಾದಂತಿದೆ
ಎನ್ ಮನದ ಬಾವನೆಯ‌ ಬಯಲು;
ತಣಿಸಬಾರದೇಕೆ ನೀ ,
ನಿನ್ನೊಲವೆಂಬ ಕಡಲ ನೀರ ಸೋಕಿಸಿ;

******

ಮೋಡದಂಚನು‌ ಮೀರಿ

ಮನದೊಳು ಹುದುಗಿದ ಒಲುಮೆಯ ಬಾವನೆಗಳ
ಮಾಡಲು ನೀ ವಿಲೇವಾರಿ, ಸಂಗಾತಿಯೊಡನೆ;
ಕೂಡಿಟ್ಟ ಕನಸುಗಳು, ಇನ್ನು ಜೀವಂತ!
ಮೈದಳೆದು ನಿಲ್ಲುವವು ಸಾಕಾರಕೆ;
ಹಾರುವವು ಗರಿಬಿಚ್ಚಿ, ಅಡೆತಡೆಗಳೆಂಬ ಮೋಡದಂಚನು ಮೀರಿ;

******

ಪ್ರೇಮಕೈದಿ

ನಿನ್ನೊಲವೆಂಬ ಕಂಬಿಗಳ ಹಿಂದೆ
ಸೆರೆಯಾಗಲು,
ಮಾಡಬೇಕೆಂದಿರುವೆ ಮುದ್ದಾದ ತಪ್ಪೊಂದನು..
ಹೀಗಾದರೂ, ಆಗಬಹುದೇನೋ!
ನನ್ನೊಲವ ಕುರಿತ ಮೇಲ್ವಿಚಾರಣೆ;
ನೀಡಬಾರದೇಕೆ ನೀ ದೂರನು?
ಬಂದಿಯಾದರೇನಂತೆ!
ಎಶ್ಟಂದರೂ‌ ನಾ ನಿನ್ನ ಪ್ರೇಮಕೈದಿ

(ಚಿತ್ರಸೆಲೆ: copilot.mocrosoft.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *