ತಟ್ಟನೆ ಮಾಡಿ ನೋಡಿ ಉಪ್ತುಂಡು
ಏನೇನು ಬೇಕು ?
- ಕೋಳಿ ಬಾಡು – ಕಾಲು ಕಿಲೋ
- ಬೆಳ್ಳುಳ್ಳಿ – 4 ಎಸಳು
- ಶುಂಟಿ – ಕಾಲು ಇಂಚು
- ಈರುಳ್ಳಿ – ಅರ್‍ದ ಬಾಗ
- ಹಸಿಮೆಣಸು – 2
- ಅಡುಗೆ ಎಣ್ಣೆ – 2 ರಿಂದ 3 ಚಮಚ
- ಉಪ್ಪು – ಅರ್‍ದ ಚಮಚ
- ಲಿಂಬೆ ರಸ – ಅರ್‍ದ ಬಾಗ
- ಅರಿಶಿಣ ಹುಡಿ – ಕಾಲು ಚಮಚ
ಮಾಡುವ ಬಗೆ:
ಮೊದಲಿಗೆ ಕಾದ ಬಾಣಲೆಯನ್ನು ಕಾಯಲು ಇಡಿ. ನಂತರ ಉರಿಯನ್ನು ಕಡಿಮೆ ಮಾಡಿ ಅಡುಗೆ ಎಣ್ಣೆಯನ್ನು ಹಾಕಿಕೊಳ್ಳಿ. ಎಣ್ಣೆ ಕಾದ ನಂತರ ಅದಕ್ಕೆ ಹೆಚ್ಚಿಟ್ಟುಕೊಂಡ ಹಸಿಮೆಣಸು ಮತ್ತು ಈರುಳ್ಳಿಯನ್ನು ಹಾಕಿ ಕಡಿಮೆ ಉರಿಯಲ್ಲಿ ಬಾಡಿಸಿಕೊಳ್ಳಿ. ನಂತರ ಜಜ್ಜಿದ ಶುಂಟಿ-ಬೆಳ್ಳುಳ್ಳಿಯನ್ನು ಹಾಕಿ ಹುರಿಯಿರಿ, ಅದಕ್ಕೆ ಕಾಲು ಚಮಣ ಅರಿಶಿಣ ಹುಡಿಯನ್ನು ಸೇರಿಸಿ. ಈಗ ಕೋಳಿ ಬಾಡನ್ನು ಹಾಕಿ, ರುಚಿಗೆ ತಕ್ಕಶ್ಟು ಉಪ್ಪು ಮತ್ತು ಅರ್‍ದ ಲೋಟ ನೀರನ್ನು ಸೇರಿಸಿ ಬಾಣಲೆಯನ್ನು ಮುಚ್ಶಿ 15 ನಿಮಿಶ ಬೇಯಿಸಿ. ಬೇಯಿಸಿದ ಮೇಲೆ ಕೊನೆಯಲ್ಲಿ ಅರ್‍ದ ಬಾಗ ಲಿಂಬೆ ರಸವನ್ನು ಹಿಂಡಬೇಕು. ಈಗ ಅನ್ನದ ಜೊತೆಗೆ ಇಲ್ಲವೇ ಹಾಗೆಯೇ ಸವಿಯಲು ಉಪ್ತುಂಡು ಸಿದ್ದ. ಕಡಿಮೆ ಸಮಯದಲ್ಲಿ ಕಡಿಮೆ ಪದಾರ್‍ತಗಳನ್ನು ಬಳಸಿ ತಯಾರು ಮಾಡಬಹುದಾದ ಒಂದು ಕೋಳಿ ಕಾದ್ಯ ಇದಾಗಿದ್ದು, ಜಿಮ್ಮಿಗೆ ಹೋಗುವವರಿಗೆ ಅನುಕೂಲಕರವಾಗಿದೆ.
( ಚಿತ್ರಸೆಲೆ – ಬರಹಗಾರರು )
ಇತ್ತೀಚಿನ ಅನಿಸಿಕೆಗಳು