ಮಾಡಿ ನೋಡಿ ಗರಿ ಗರಿಯಾದ ಬೆಳ್ಳಿ ಮೀನು ಪ್ರೈ

– ನಿತಿನ್ ಗೌಡ.

ಏನೇನು ಬೇಕು ?

  • ಬೆಳ್ಳಿ ಮೀನು – 1/4 ಕೆ.ಜಿ.
  • ಕಾರದ ಪುಡಿ – 2 ಚಮಚ
  • ಉಪ್ಪು – ರುಚಿಗೆ ತಕ್ಕಶ್ಟು
  • ದನಿಯಾ ಪುಡಿ – 1/4 ಚಮಚ
  • ಅರಿಶಿಣ – 4 ಚಿಟಿಗೆ
  • ನಿಂಬೆ/ಹುಣಸೆ ಹುಳಿ – ಸ್ವಲ್ಪ
  • ಜೋಳದ ಹಿಟ್ಟು – 1/2 ಚಮಚ
  • ಅಕ್ಕಿ ಹಿಟ್ಟು – 1/2‌ ಚಮಚ
  • ಶುಂಟಿ-ಬೆಳ್ಳುಳ್ಳಿ ಗಸಿ – 1/4 ಚಮಚ
  • ಎಣ್ಣೆ – ಕರಿಯಲು ಬೇಕಾದಶ್ಟು
  • ಕರಿಬೇವು – 1 ಎಸಳು

ಹೇಗೆ ಮಾಡುವುದು ?

ಮೊದಲಿಗೆ ತೊಳೆದು ಸೋಸಿಟ್ಟುಕೊಂಡ ಬೆಳ್ಳಿ ಮೀನುಗಳಿಗೆ(Silver fish) ಉಪ್ಪು ಹಾಕಿ ಕಲಸಿ ಪಕ್ಕಕ್ಕಿಡಿ. ಈಗ ಒಂದು ಪಾತ್ರೆಗೆ ಕಾರದ ಪುಡಿ, ಅರಿಶಿಣ, ದನಿಯಾ ಪುಡಿ, ಉಪ್ಪು, ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಶುಂಟಿ ಬೆಳ್ಳುಳ್ಳಿ ಗಸಿ ಮತ್ತು ನಿಂಬೆ ಇಲ್ಲವೇ ಹುಣಸೆ ಹುಳಿ ಸೇರಿಸಿ. ಈಗ ಇದಕ್ಕೆ ಸ್ವಲ್ಪ ನೀರು ಹಾಕಿ ಸ್ವಲ್ಪ ದಪ್ಪದಾಗಿ ಕಲಸಿಕೊಳ್ಳಿ. ಈಗ ಇದನ್ಬು ಬೆಳ್ಳಿ ಮೀನುಗಳಿಗೆ ದಪ್ಪದಾಗಿ ಸವರಿ ಒಂದು ಕಾಲುಗಂಟೆ ತಂಗಳು ಪೆಟ್ಟಿಗೆಯಲ್ಲಿ (ಪ್ರಿಡ್ಜ್) ಇಡಿ. ಈಗ ಇವನ್ನು ಎಣ್ಣೆಯಲ್ಲಿ ಕರಿಯಿರಿ. ಕರಿಯುವಾಗ ಬೇವಿನ ಎಲೆಗಳನ್ನು ಹಾಕಿಕೊಳ್ಳಬಹುದು. ಈಗ ಗರಿ ಗರಿಯಾದ ಬೆಳ್ಳಿ ಮೀನು ಪ್ರೈ ತಯಾರಿದ್ದು ಸಂಜೆ ತಿಂಡಿಗೆ ಇಲ್ಲವೇ ಊಟದ ಊಟದ ಒಟ್ಟಿಗೆ ಸವಿಯಬಹುದು.

( ಚಿತ್ರಸೆಲೆ: ಬರಹಗಾರರು )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *