ಹನಿಗವನಗಳು

– ವೆಂಕಟೇಶ ಚಾಗಿ

*** ಬಲೆ ***

ನಿನ್ನ ಮೋಹದ
ಮಾತುಗಳ ಬಲೆಯೊಳಗೆ
ನಾನೆಂದಿಗೂ ಮೂಕ
ಅರ‍್ತವಾಗದಿದ್ದರೂ
ಮತ್ತೆ ಮತ್ತೆ ಹೂಂ ಎನ್ನುವ
ಚಿರಕಾಲದ ಮಂಡೂಕ

 

*** ವೇದನೆ ***

ನನ್ನ ಅಂತರಂಗದ
ಕಜಾನೆಯೊಳಗೆ ಇವೆ
ನಿನ್ನದೇ ನೆನಪುಗಳು
ನೀನು ಮರೆತರೂ
ಮನಸ್ಸು ಮರೆಯದು
ದಿನಗಳೆಲ್ಲಾ ಒಡಪುಗಳು

 

*** ಕ್ಶಣಿಕ ***

ಸಾಕು ಬಿಡು ಇಶ್ಟೇ
ನೀ ಕೊಟ್ಟ ಕ್ಶಣಗಳು
ಈ ಬದುಕು ಕ್ಶಣಿಕ
ಬದುಕಿನ ಕೊನೆವರೆಗೂ
ನೀ ಬಳಿ ಇರದೆ
ನಾನಾಗಲಾರೆ ದನಿಕ

 

*** ಯೋಚನೆ ***

ಕಡಲಿಗೂ ತವಕ
ದರೆಯ ಆವರಿಸಲು
ನೀರಾಗುವ ಯೋಚನೆ
ನೀನೊಂದು ಕಡಲು
ನಾನೊಂದು ಮಳೆಹನಿ
ಪ್ರೀತಿಯೇ ಇದರ ಸೂಚನೆ

 

*** ರೆಪ್ಪೆ ***

ಅಂದದ ಕಣ್ಣುಗಳಿಗೆ
ಅದೆಂತಹ ತವಕ
ರೆಪ್ಪೆಗಳಿಂದ ಮುಚ್ಚಲು
ಸ್ವಲ್ಪ ನಕ್ಕುಬಿಡು
ಕಣ್ಣು ತೆರೆದುಬಿಡು
ಹ್ರುದಯದ ಗರಿಬಿಚ್ಚಲು

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *