ಮೂಲಂಗಿ ಸಾಸಿವೆ ಪಲ್ಯ
– ನಿತಿನ್ ಗೌಡ.
ಏನೇನು ಬೇಕು ?
- ಮೂಲಂಗಿ – ಅರ್‍ದ ಕೆ.ಜಿ
- ಸಾಸಿವೆ – ಅರ್‍ದ ಚಮಚ
- ಉದ್ದಿನಬೇಳೆ – ಅರ್‍ದ ಚಮಚ
- ಕಡಲೆ ಬೇಳೆ – ಒಂದು ಚಮಚ
- ಜೀರಿಗೆ – ಕಾಲು ಚಮಚ
- ಹಸಿಮೆಣಸು – 4-5
- ಕರಿಬೇವು – 10 ಎಸಳು
- ಟೋಮೋಟೋ – 2 ಚಿಕ್ಕದು
- ಈರುಳ್ಳಿ – 1 ದೊಡ್ಡದು
- ಉಪ್ಪು – ರುಚಿಗೆ ತಕ್ಕಶ್ಟು
- ಅರಿಶಿಣ ಪುಡಿ – ಸ್ವಲ್ಪ
- ಕಾಯಿತುರಿ – ಕಾಲು ಕಪ್ಪು
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಎಣ್ಣೆ – ಒಗ್ಗರೆಣೆಗೆ
ಮಾಡುವ ಬಗೆ:
ಮೊದಲಿಗೆ ಮೂಲಂಗಿಯನ್ನು ನುಣ್ಣಗೆ ತುರಿದುಕೊಳ್ಳಿರಿ. ಈಗ ಒಂದು ಪಾತ್ರೆಗೆ ಎಣ್ಣೆ ಹಾಕಿ ಕಾಯಲು ಇಡಿ. ಈಗ ಇದಕ್ಕೆ ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ, ಜೀರಿಗೆ, ಕರಿಬೇವಿನೆಲೆ, ಹಸಿಮೆಣಸು ಮತ್ತು ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ ಹುರಿಯಿರಿ. ಈಗ ಇದಕ್ಕೆ ಚಿಕ್ಕದಾಗಿ ಹೆಚ್ಚಿದ ಟೋಮೋಟೋ ಹಾಕಿ, ನಂತರ ಅರಿಶಿಣ ಮತ್ತು ಉಪ್ಪನ್ನು ಹಾಕಿರಿ. ಕೊನೆಗೆ ಮೂಲಂಗಿ ಹಾಕಿ, ಅದರ ರಸ ಆರುವವರೆಗೆ ಬೇಯಿಸಿ. ಕೊನೆಗೆ ಕಾಯಿತುರಿ ಹಾಕಿ, ಅಲ್ಲಾಡಿಸಿ ಒಂದೈದು ನಿಮಿಶ ಬೇಯಿಸಿ ಒಲೆ ಆರಿಸಿ. ಕೊನೆಗೆ ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪನ್ನು ಹಾಕಿ ಕಲಸಿಕೊಳ್ಳಿರಿ. ಈಗ ‘ಮೂಲಂಗಿ ಸಾಸಿವೆ’ ಪಲ್ಯ ತಯಾರಿದ್ದು, ಅನ್ನದ ಜೊತೆ ಇಲ್ಲವೇ ರೊಟ್ಟಿಯ ಜೊತೆ ಸವಿಯಲು ಚೆನ್ನಾಗಿರುತ್ತದೆ.
(ಚಿತ್ರಸೆಲೆ: ಬರಹಗಾರರು )
ಇತ್ತೀಚಿನ ಅನಿಸಿಕೆಗಳು