ಮಾಡಿನೋಡಿ ಕಾರದ ಕಡ್ಡಿ
– ಸವಿತಾ.
ಬೇಕಾಗುವ ಸಾಮಾನುಗಳು
- ಮೈದಾ – 1 ಲೋಟ
- ಕಡಲೇ ಹಿಟ್ಟು – 1 ಲೋಟ
- ಒಣ ಕಾರದ ಪುಡಿ – ಅರ್‍ದ ಚಮಚ (ರುಚಿಗೆ ಅನುಸಾರ)
- ಉಪ್ಪು – ರುಚಿಗೆ ತಕ್ಕಶ್ಟು
- ಓಂ ಕಾಳು (ಅಜೀವಾಯಿನ್) – ಕಾಲು ಚಮಚ
- ಕರಿಯಲು ಎಣ್ಣೆ
ಮಾಡುವ ಬಗೆ
ಮೊದಲಿಗೆ ಕಡಲೇ ಹಿಟ್ಪು, ಮೈದಾ ಹಿಟ್ಟು, ಉಪ್ಪು ಮತ್ತು ಕಾರ ಸೇರಿಸಿರಿ. ಆಮೇಲೆ ಅಜೀವಾಯಿನ್ ಸ್ವಲ್ಪ ಪುಡಿ ಮಾಡಿ ಹಾಕಿ, ಸ್ವಲ್ಪ ನೀರು ಸೇರಿಸಿ ಕಲಸಿರಿ. ಈಗ ಚಪಾತಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ನಾದಿಕೊಂಡು, ಅಂಗೈ ಅಗಲ ಕಡ್ಡಿ ಹೊಸೆದು ಇಟ್ಟು ಕೊಳ್ಳಿರಿ. ನಂತರ ಕೈಗೆ ಸ್ವಲ್ಪ ಎಣ್ಣೆ ಹಚ್ಚಿ ತೆಳ್ಳಗೆ ಹೊಸೆದು ಎರಡು ಮೂರು ತಟ್ಟೆಯಲ್ಲಿ ಜೋಡಿಸಿಡಿ. ನಂತರ ಎಣ್ಣೆ ಕಾಯಿಸಿ ಕರಿದು ತೆಗೆಯಿರಿ. ಈಗ ಕಾರದ ಕಡ್ಡಿ ತಯಾರಾಯಿತು. ಇದನ್ನು ಹೆಚ್ಚಾಗಿ ಕ್ರಿಶ್ಣ ಜನ್ಮಾಶ್ಟಮಿ ಹಬ್ಬದ ದಿನ ಪ್ರಸಾದವಾಗಿ ಮಾಡಿ ಸವಿಯುತ್ತಾರೆ.
(ಚಿತ್ರಸೆಲೆ: ಬರಹಗಾರರು)
ಇತ್ತೀಚಿನ ಅನಿಸಿಕೆಗಳು